ಹುಬ್ಬಳ್ಳಿ: ಎಸ್.ಜೆ.ಆರ್.ವಿ. ಮಂಡಳದ ಶಾಂತಿನಿಕೇತನ ಸಮೂಹ ಸಂಸ್ಥೆಗಳ ಆಡಳಿತ ಮಂಡಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಉದ್ಯಮಿ ಹಾಗೂ ಸಮಾಜ ಸೇವಕ ಭವರಲಾಲ್ ಸಿ. ಜೈನ್ (ಲಕ್ಕಿ) 114 ಮತಗಳನ್ನು ಪಡೆಯುವ ಮೂಲಕ ಸತತ ನಾಲ್ಕನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಪ್ರತಿಸ್ಪರ್ಧಿಯಾಗಿದ್ದ ಉದ್ಯಮಿ ರಮೇಶ ಬಾಫಣಾ ಅವರನ್ನು 36 ಮತಗಳಿಂದ ಪರಾಭವಗೊಳಿಸಿದ ಭವರಲಾಲ್ ಜೈನ್ ಅವರ 11 ಸದಸ್ಯರ ತಂಡ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಒಟ್ಟು 216 ಮತಗಳ ಪೈಕಿ 194 ಮತಗಳು ಚಲಾವಣೆಯಾಗಿದ್ದವು. ಈ ಪೈಕಿ ರಮೇಶ ಬಾಫಣಾ 78 ಮತಗಳನ್ನು ಪಡೆದುಕೊಂಡಿದ್ದರು. 2 ಮತಗಳು ಅಮಾನ್ಯವಾಗಿದ್ದವು.
ಫಲಿತಾಂಶ ಹೊರಬೀಳುತ್ತಿದ್ದಂತೆ ಸಂಸ್ಥೆಯ ಅಧ್ಯಕ್ಷರಾಗಿ ಭವರಲಾಲ್ ಸಿ. ಜೈನ್ (ಲಕ್ಕಿ), ಚೀಫ್ ಸೆಕ್ರೆಟರಿ ಆಗಿ ಭರತ ಭಂಡಾರಿ, ಉಪಾಧ್ಯಕ್ಷರಾಗಿ ಮಹೇಂದ್ರ ಪಾಲೊ್ಗೕತಾ, ಖಜಾಂಚಿಯಾಗಿ ಪೂರಣ ನಹಾಟಾ, ನಿರ್ದೇಶಕರಾಗಿ ಸೋಹನಲಾಲ್ ಜೈನ್, ಮನೋಜ ಜೈನ್, ವಿವೇಕ ಶಾ ಹಾಗೂ ಮಹಾವೀರ ಜೈನ್ ಸೇರಿದಂತೆ 11 ಜನ ಆಯ್ಕೆಯಾಗಿದ್ದಾರೆ.
ಎಸ್.ಜೆ.ಆರ್.ವಿ. ಮಂಡಳವು ಶಾಂತಿ ನಿಕೇತನ ಆಂಗ್ಲ ಮಾಧ್ಯಮ ಶಾಲೆ, ಶಾಂತಿ ನಿಕೇತನ ಪಿಯು ಕಾಲೇಜು, ಶಾಂತಿನಿಕೇತನ ಪದವಿ ಕಾಲೇಜು, ಶಾಂತಿ ನಿಕೇತನ ಹಿಂದಿ ಹೈಸ್ಕೂಲ್ ಹಾಗೂ ಮಹಾವೀರ ಶಿಶು ವಿಹಾರ ಶಿಕ್ಷಣ ಸಂಸ್ಥೆಗಳನ್ನು ಒಳಗೊಂಡಿದೆ. ಪರವೇಶ ಕೊಠಾರಿ, ಅಭಿಷೇಕ ಮೆಹ್ತಾ, ಮಹಾವೀರ ಶ್ರೀಮಾಲ್, ಪೃಥ್ವಿರಾಜ ಸುರಾನಾ, ಮನೋಜಕುಮಾರ ಪೊಮಾನಿ ಅವರು ಜಯಗಳಿಸಿದ್ದಾರೆ.