ತರೀಕೆರೆಯಲ್ಲಿ ಭಸ್ಮಾಸುರ ಮೋಹಿನಿ ಯಕ್ಷಗಾನದಲ್ಲಿ ಕಥಾ ಪ್ರಸಂಗವನ್ನು ಮನೋಜ್ಞವಾಗಿ ಪ್ರದರ್ಶಿಸಿದ ಕುಂದಾಪುರ ಶ್ರೀ ಮಹಾ ಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ ಕಲಾವಿದರು. 
ಜಿಲ್ಲೆ

ಭಸ್ಮಾಸುರ ಮೋಹಿನಿ ಯಕ್ಷಗಾನ

ಎಸ್.ಎನ್.ರವೀಂದ್ರ

ತರೀಕೆರೆ: ಪಟ್ಟಣ ಹೊರವಲಯದ ಅರಮನೆ ಹೋಟೆಲ್ ಸಭಾಂಗಣದಲ್ಲಿ ಶುಕ್ರವಾರ ರಾತ್ರಿ ಭಸ್ಮಾಸುರ ಮೋಹಿನಿ ಯಕ್ಷಗಾನ ಪ್ರದರ್ಶಿಸಲಾಯಿತು.

ಕುಂದಾಪುರದ ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ ಕಲಾವಿದರು ಪ್ರದರ್ಶಿಸಿದ ಯಕ್ಷಗಾನ ಪ್ರಸಂಗವನ್ನು ನೂರಾರು ಪ್ರೇಕ್ಷಕರು ಗಂಟೆಗಟ್ಟಲೇ ಕುಳಿತು ಆಸಕ್ತಿಯಿಂದ ವೀಕ್ಷಿಸಿದರು. ಭಾಗವತರಾಗಿ ಆಜ್ರಿ ಅರುಣ್‌ಕುಮಾರ್ ಶೆಟ್ಟಿ ಮುಮ್ಮೇಳದಲ್ಲಿ ಕ್ಯಾದಗಿ ಮಹಾಬಲೇಶ್ವರ ಭಟ್, ತಿಮ್ಮಣ್ಣ ನಾಯ್ಕ, ನಾಗರಾಜ ದೇವಿಮಕ್ಕಿ, ವಂಡಾರು ಗೋವಿಂದ, ಸಂದೇಶ್ ಶೆಟ್ಟಿ, ಸುದರ್ಶನ್ ಇನ್ನಿತರ ಕಲಾವಿದರು ತೋರಿದ ಮನೋಜ್ಞ ಅಭಿನಯ ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಳಿಸಿತು.