ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಆಯುಕ್ತರಾಗಿ ಭರತ್ ಎಸ್. ಅವರನ್ನು ನೇಮಿಸಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ. ವಾಕರಸಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಅವರಿಗೆ ಸಹವರ್ತಿಯಾಗಿ ಈ ಜವಾಬ್ದಾರಿ ನೀಡಲಾಗಿದೆ. ಪಾಲಿಕೆ ಆಯುಕ್ತರಾಗಿದ್ದ ಡಾ. ಬಿ. ಗೋಪಾಲಕೃಷ್ಣ ಅವರ ವರ್ಗಾವಣೆ ನಂತರ ಈ ಸ್ಥಾನ ಖಾಲಿ ಇತ್ತು.