ಚಿತ್ರದುರ್ಗ: ಕೃಷಿ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಅಖಿಲ ಭಾರತ ಕಿಸಾನ್ ಸಂಘರ್ಷ ಸಂಯೋಜನಾ ಸಮಿತಿ,ಸಂಯುಕ್ತ ಕಿಸಾನ್ ಮಂಚ್ ಕರೆ ನೀಡಿದ್ದ ಅಖಿಲ ಭಾರತ ಬಂದ್ ಹಿನ್ನೆಲೆಯಲ್ಲಿ ನಗರದ ಗಾಂಧಿ ವೃತ್ತದ ಬಳಿ ನಾನಾ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಈ ಮುಷ್ಕರದಿಂದಾಗಿ ಬಿ.ಡಿ. ರಸ್ತೆ, ಸಂತೆ ಹೊಂಡ ರಸ್ತೆ,ಲಕ್ಷ್ಮೀಬಜಾರ್,ಮೆದೇಹಳ್ಳಿ ರಸ್ತೆ ಮೊದಲಾದ ವಾಣಿಜ್ಯ ಸ್ಥಳಗಳಲ್ಲಿ ಕೆಲವು ಕಾಲ ಅಂಗಡಿ ಮುಂಗಟ್ಟುಗಳು ಮುಚ್ಚಿ ದ್ದವು. ಹಲವು ಸಂಘಟನೆಗಳ ಸದಸ್ಯರು,ಕಾಂಗ್ರೆಸ್ ಕಾರ‌್ಯಕರ್ತರು ಅಂಗಡಿ ಮುಂಗಟ್ಟು ಮುಚ್ಚುವಂತೆ ಬಲವಂತಪಡಿಸಿದ್ದು ಕಂಡು ಬಂತು.
ಮಾನವ ಸರಪಳಿ ರಚಿಸಿ ಪ್ರತಿಭಟಿಸಿದ ರೈತರು,ನಾನಾ ಸಂಘಟನೆಗಳ ಸದಸ್ಯರು ಹಾಗೂ ಕಾಂಗ್ರೆಸ್ ಕಾರ‌್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ವೇಳೆ ಕೆಲ ತಾಸು ಸ್ಥಳದಲ್ಲೇ ಧರಣಿಯನ್ನೂ ನಡೆಸಿದರು. ರೈತ ಸಂಘಟನೆ ವಿವಿಧ ಬಣಗಳು, ಕರವೇ ಬಣಗಳು, ಎಡಪಕ್ಷಗಳು ನಾನಾ ಸಂಘಟನೆಗಳು,ಕಾಂಗ್ರೆಸ್,ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಸಂಘಗಳು,ಮಾದಿಗ ಮೀಸ ಲಾತಿ ಸಮಿತಿ,ಭೀಮ್ ಆರ್ಮಿ,ಜನ ಶಕ್ತಿ,ವಸತಿ ಹೋರಾಟ ಸಮಿತಿ ಮೊದಲಾದ ಸಂಘಟನೆಗಳ ಪ್ರಮುಖರಾದ ಟಿ.ನುಲೇನೂರು ಶಂಕ್ರ ಪ್ಪ,ರವಿಕುಮಾರ್, ಎಂ.ಕೆ.ತಾಜ್‌ಪೀರ್,ಕುಮಾರ್,ಹುಲ್ಲೂರು ಕುಮಾರ ಸ್ವಾಮಿ,ಮಂಜುನಾಥ್,ರಮೇಶ್,ಬಸವರಾಜಪ್ಪ,ಗೌಸ್‌ಪೀರ್ ಸೇ ರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.
ಪ್ರಮುಖ ರಸ್ತೆಗಳಲ್ಲಿ ಕೆಲ ಕಾಲ ವಾಣಿಜ್ಯ ವಹಿವಾಟು ಸ್ಥಗಿತಗೊಂಡಿದ್ದರು ಸರ್ಕಾರಿ ಕಚೇರಿಗಳು,ಬ್ಯಾಂಕ್ ಮತ್ತಿತರ ವಾಣಿಜ್ಯ ವಹಿ ವಾಟು ಕೇಂದ್ರಗಳು ಎಂದಿನಂತೆ ತೆರೆದಿದ್ದವು. ರಾಜ್ಯರಸ್ತೆ ಸಾರಿಗೆ, ಖಾಸಗಿ ಬಸ್,ಲಾರಿ, ಆಟೋ ಮತ್ತಿತರ ವಾಹನಗಳ ಸಂಚಾರ ಸಹಜ ವಾಗಿತ್ತು.