ಮೂಡುಬಿದಿರೆ: ಶ್ರೀದೇವಿ ನೃತ್ಯ ಕೇಂದ್ರದ ಸುವರ್ಣ ಸಂಭ್ರಮದಲ್ಲಿದ್ದು, ನಾಟ್ಯಾಲಯದ ದ್ವಿತೀಯ ಶಾಖೆಯು ಮೂಡುಬಿದಿರೆಯ ದವಳತ್ರಯ ಜೈನ ಕಾಶಿ ಟ್ರಸ್ಟ್, ಶ್ರೀ ದಿಗಂಬರ ಜೈನ ಮಠ ಸಹಯೋಗದಲ್ಲಿ ರಮಾರಾಣಿ ಶೋಧ ಸಂಸ್ಥಾನ ಸಭಾ ಭವನದಲ್ಲಿ ಜನವರಿ 5ರಿಂದ ಆರಂಭಗೊಳ್ಳಲಿದೆ.
ಅದರ ಉದ್ಘಾಟನಾ ಆಮಂತ್ರಣ ಭಟ್ಟಾರಕ ಸ್ವಾಮೀಜಿ ಬಿಡುಗಡೆಗೊಳಿಸಿ, ಕಲಾವಿದೆ ಆರತಿ ಹರೀಶ್ ಶೆಟ್ಟಿ ದಂಪತಿ ಹಾಗೂ ನೃತ್ಯ ಶಿಕ್ಷಕಿ ನಯನಾ ಕುಮಾರಿ ಮಿಜಾರು ಅವರನ್ನು ಗೌರವಿಸಿದರು.
ಮಾಹಿತಿ ನೀಡಿದ ಸ್ವಾಮೀಜಿ, ಮಂಗಳೂರು, ಮುಂಬೈನಲ್ಲಿ ಭರತನಾಟ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ, ಶಾಂತಲಾ ಪ್ರಶಸ್ತಿ ವಿಜೇತೆ ಜಯಲಕ್ಷ್ಮೀ ಆಳ್ವ ಪ್ರಾರಂಭಗೊಂಡಿರುವ ಶ್ರೀದೇವಿ ನೃತ್ಯ ಕೇಂದ್ರವನ್ನು ಪುತ್ರಿ ಡಾ.ಆರತಿ ಶೆಟ್ಟಿ ಮುನ್ನಡೆಸುತ್ತಿದ್ದಾರೆ. ಪ್ರತಿ ಶನಿವಾರ ಸಂಜೆ 4.30, ಭಾನುವಾರದಂದು ಬೆಳಗ್ಗೆ 10ಕ್ಕೆ ತರಗತಿ ನಡೆಯಲಿದೆ. ಆಸಕ್ತರು ತರಗತಿಗೆ ಸೇರಬಹುದು ಎಂದರು.