ಜಿಲ್ಲೆ

ಆರ್ಲಪದವು ಅಬೂಬಕ್ಕರ್‌ಗೆ ಭಾರತ ಸೇವಾರತ್ನ ಪ್ರಶಸ್ತಿ

ಪುತ್ತೂರು ಗ್ರಾಮಾಂತರ: ಹೈದರಾಬಾದ್‌ನ ಅಕ್ಷಯ ಪ್ರಾರ್ಥನಾ ಫೌಂಡೇಷನ್ ವತಿಯಿಂದ ಸಾಮಾಜಿಕ, ಶೈಕ್ಷಣಿಕ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಮೊದಲಾದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ನೀಡಲ್ಪಡುವ ರಾಷ್ಟ್ರಮಟ್ಟದ ಭಾರತ ಸೇವಾ ರತ್ನ ಪ್ರಶಸ್ತಿಗೆ ಎಸ್. ಅಬೂಬಕರ್ ಅರ್ಲಪದವು ಭಾಜನರಾಗಿದ್ದಾರೆ. ಬೆಂಗಳೂರು ಗಾಂಧಿ ಭವನದಲ್ಲಿ ಭಾನುವಾರ ವಾಲ್ಮೀಕಿ ಬ್ರಹ್ಮಾನಂದ ಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಿಕ್ಷಣ ಇಲಾಖೆಯ ಪತ್ರಾಂಕಿತ ಗೆಜೆಟೆಡ್ ಮ್ಯಾನೇಜರ್ ಬಿ. ಮೋಹನ್ ಕಿಶೋರ್ ಅವರು ಎಸ್.ಅಬೂಬಕ್ಕರ್ ಆರ್ಲಪದವು ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಪಾಣಾಜೆ ಗ್ರಾಮದ ಆರ್ಲಪದವು ಗಡಿನಾಡು ಶ್ರೇಯೋಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾಗಿರುವ ಎಸ್.ಅಬೂಬಕ್ಕರ್ ಆರ್ಲಪದವು ವಿವಿಧ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.