ಜಿಲ್ಲೆ

ರಾಷ್ಟ್ರಭಕ್ತರಿಂದ ಭಾರತ ಮಾತೆಗೆ ಪೂಜೆ : ಅಯೋಧ್ಯೆಯಲ್ಲಿ ದೇವಳಗಳ ಪ್ರಾಣಪ್ರತಿಷ್ಠಾಪನೆ ಹಿನ್ನೆಲೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಅಯೋಧ್ಯೆಯಲ್ಲಿ ಮುಕ್ತಾಯದ ಹಂತದಲ್ಲಿರುವ ಶ್ರೀರಾಮ ಮಂದಿರದಲ್ಲಿ 14 ದೇವಾಲಯಗಳ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಪುಂಜಾಲಕಟ್ಟೆ ರಾಷ್ಟ್ರಭಕ್ತ ನಾಗರಿಕರ ವತಿಯಿಂದ ಪುಂಜಾಲಕಟ್ಟೆ ಶ್ರೀ ಗೋಪಾಲಕಷ್ಣ ದೇವರಿಗೆ ಕ್ಷೀರಾಭಿಷೇಕ ಹಾಗೂ ಸಿಂಧೂರ ವಿಜಯೋತ್ಸವ ಪ್ರಯುಕ್ತ ಭಾರತ ಮಾತಾ ಪೂಜನ ಕಾರ್ಯಕ್ರಮ ಗುರುವಾರ ಜರುಗಿತು.

ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ದಿಕ್ಸೂಚಿ ಭಾಷಣ ಮಾಡಿ, ಅಯೋಧ್ಯೆ ಶ್ರೀರಾಮ ಮಂದಿರ ನಮ್ಮ ದೇಶದ ಅಸ್ಮಿತೆಯಾಗಿದ್ದು, ಪೂರ್ಣ ಪ್ರಮಾಣದಲ್ಲಿ ದೇವಸ್ಥಾನ ನಿರ್ಮಾಣವಾಗಿರುವುದು ಸಂಭ್ರಮದ ವಿಚಾರ ಎಂದರು.

ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ ಮಾತನಾಡಿದರು. ಅರ್ಚಕ ವಾಸುದೇವ ಕುಂಞಣ್ಣಾಯ ನೇತೃತ್ವದಲ್ಲಿ ಶ್ರೀರಾಮ ಹಾಗೂ ಭಾರತ ಮಾತೆಯ ಪೂಜೆ ನಡೆಯಿತು. ನಿವತ್ತ ಯೋಧರಾದ ಗುಣಪಾಲ್ ಜೈನ್ ಪುರಿಯ ಹಾಗೂ ಕಾಂತಪ್ಪ ಗೌಡ ಹಟ್ಟತ್ತೋಡಿ ಅವರನ್ನು ನಾಗರಿಕರ ವತಿಯಿಂದ ಸನ್ಮಾನಿಸಲಾಯಿತು.

ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಎಂ.ನಾಗೇಶ್ ಪ್ರಭು ಮೂರ್ಜೆ, ಪ್ರಶಾಂತ್ ಪುಂಜಾಲಕಟ್ಟೆ, ರಾಮದಾಸ ಕಾಮತ್, ಲಿಂಗಪ್ಪ, ರವೀಂದ್ರ ಶೆಟ್ಟಿ ಅನಿಲಡೆ, ಯಶೋಧರ, ಹರೀಶ್ಚಂದ್ರ ಶೆಟ್ಟಿಗಾರ್, ರಘುವೀರ ಬಾಳಿಗ, ಬಾಲಕಷ್ಣ ನಾಯಕ್ ಮತ್ತಿತರರು ಉಪಸ್ಥಿತರಿದ್ದರು. ರತ್ನದೇವ್ ಪುಂಜಾಲಕಟ್ಟೆ ಅಭಿನಂದನಾ ಪತ್ರ ವಾಚಿಸಿದರು. ಧರ್ಣಪ್ಪ ಗೌಡ ಕಾರ್ಯಕ್ರಮ ನಿರೂಪಿಸಿದರು.