ಗಂಗೊಳ್ಳಿ: ಸ್ವಾತಂತ್ರೃಕ್ಕಾಗಿ ಲಕ್ಷಾಂತರ ಮಂದಿ ಪ್ರಾಣ ತ್ಯಾಗ ಬಲಿದಾನ ಮಾಡಿದ ಫಲವಾಗಿ ನಾವಿಂದು ದೇಶದಲ್ಲಿ ಶಾಂತಿಯಿಂದ ಸ್ವತಂತ್ರವಾಗಿ ನೆಲೆಸಲು ಸಾಧ್ಯವಾಗಿದೆ. ದೇಶ ಬಲಿಷ್ಠವಾಗಿ ಬೆಳೆಯುತ್ತಿದ್ದು, ವಿಶೇಷವಾಗಿ ರಕ್ಷಣಾ ವ್ಯವಸ್ಥೆ ಅತ್ಯಂತ ಸದೃಢವಾಗಿದೆ. ಪ್ರತಿಯೊಬ್ಬ ನಾಗರಿಕ ದೇಶಾಭಿಮಾನ ಬೆಳೆಸಿಕೊಂಡು ಸೇವೆಗೆ ಸಂಕಲ್ಪ ಮಾಡಬೇಕಿದೆ ಎಂದು ನಿವೃತ್ತ ಯೋಧ ರಾಜೇಶ ಮೊಗವೀರ ಗಂಗೊಳ್ಳಿ ಹೇಳಿದರು.
ಸೇವಾ ಸಂಘ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಗಂಗೊಳ್ಳಿ ಸುವರ್ಣ ಮಹೋತ್ಸವ -2024 ಸಮಾರಂಭ, ಸ್ವಾತಂತ್ರೊೃೀತ್ಸವ ಹಾಗೂ ಕಾರ್ಗಿಲ್ ವಿಜಯೋತ್ಸವದ ರಜತ ಸಂಭ್ರಮಾಚರಣೆ ಪ್ರಯುಕ್ತ ಗಂಗೊಳ್ಳಿ ಶ್ರೀ ಶಾರದಾ ಮಂಟಪದಲ್ಲಿ ಗುರುವಾರ ಭಾರತ ಮಾತಾ ಪೂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಿವೃತ್ತ ಪೊಲೀಸ್ ಉಪನಿರೀಕ್ಷಕ ವಾಸಪ್ಪ ನಾಯ್ಕ ಉಡುಪಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ನರೇಂದ್ರ ಎಸ್.ಗಂಗೊಳ್ಳಿ ದಿಕ್ಸೂಚಿ ಭಾಷಣ ಮಾಡಿದರು. ವಿದ್ಯಾರ್ಥಿಗಳಾದ ಕ್ಷಮಾ ಆರ್.ಆಚಾರ್ಯ, ಶ್ರುತಿ ಎನ್.ಕೆ., ಶ್ರೇಜಸ್, ಪ್ರಾರ್ಥನಾ ಶುಭ ಹಾರೈಸಿದರು. ಸಮಿತಿ ಗೌರವಾಧ್ಯಕ್ಷ ಬಿ.ಲಕ್ಷ್ಮೀಕಾಂತ ಮಡಿವಾಳ, ಪ್ರಧಾನ ಕಾರ್ಯದರ್ಶಿ ನಿತಿನ್ ಖಾರ್ವಿ, ಕಾರ್ಯದರ್ಶಿ ಶ್ರೀಧರ ಸಕ್ಲಾತಿ, ಮಹಿಳಾ ಸಮಿತಿ ಅಧ್ಯಕ್ಷೆ ಸವಿತಾ ಯು.ದೇವಾಡಿಗ, ಕಾರ್ಯದರ್ಶಿ ಸುಜಾತಾ ಬಾಬು ಖಾರ್ವಿ, ಸಮಿತಿ ಸುವರ್ಣ ಮಹೋತ್ಸವ ಸಮಿತಿ ಪದಾಧಿಕಾರಿಗಳು, ಮಹಿಳಾ ಸಮಿತಿ ಪದಾಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.
ಸಮಿತಿ ಅಧ್ಯಕ್ಷ ಸತೀಶ್ ಜಿ. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಧನ್ಯಾಯು. ಕಾರ್ಯಕ್ರಮ ನಿರ್ವಹಿಸಿದರು. ದೀಪಾಲಿ ರಘುವೀರ ಕೆ. ವಂದೇ ಮಾತರಂ ಹಾಡಿದರು. ದ್ವಿಚಕ್ರ ಹಾಗೂ ಲಘು ವಾಹನ ಜಾಥಾ ಗಂಗೊಳ್ಳಿ ಶ್ರೀ ವೀರೇಶ್ವರ ದೇವಸ್ಥಾನದ ಬಳಿಯಿಂದ ಹೊರಟು ತ್ರಾಸಿ ಬೈಪಾಸ್ ಮೂಲಕ ಗಂಗೊಳ್ಳಿ ಮ್ಯಾಂಗನೀಸ್ ರೋಡ್ ಬಳಿ ಸಮಾಪನಗೊಂಡಿತು.