ರಾಯಚೂರು: ಜಿಲ್ಲೆಯಲ್ಲಿ ನಡೆಯುತ್ತಿರುವ ಭಾರತ್ ಮಾಲಾ ಹೆದ್ದಾರಿ ಕಾಮಗಾರಿಗಳನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸುವ ಮೂಲಕ ಜನರ ಬಳಕೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಸಂಸದ ರಾಜಾ ಅಮರೇಶ್ವರ ನಾಯಕ ತಿಳಿಸಿದರು.
ನಗರದ ಬೋಳಮಾನದೊಡ್ಡಿ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಕಾರದ ಕಚೇರಿ ಉದ್ಘಾಟಿಸಿ ಮಾತನಾಡಿ, ಹೊಸಪೇಟೆ, ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲಿ ಪ್ರಾಕಾರದ ಕಚೇರಿಗಳಿದ್ದವರು. ಮನವಿಗೆ ಸ್ಪಂಸಿ ಸಾರಿಗೆ ಸಚಿವ ನಿತೀನ್ ಗಡ್ಕರಿ ಜಿಲ್ಲೆಯಲ್ಲಿಯೂ ಕಚೇರಿ ಆರಂಭಿಸಿದ್ದರೆ ಎಂದರು.
ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಎರಡು ಭಾರತ್ ಮಾಲಾ ಯೋಜನೆ ಕಾಮಗಾರಿ ಪ್ರಾರಂಭಗೊಂಡಿವೆ. ಸೂರತ್-ಚೆನ್ನೆ ಹೆದ್ದಾರಿಯಲ್ಲಿ ನಾಲ್ಕು ಪ್ಯಾಕೇಜ್‌ಗಳಿದ್ದು, ರಾಯಚೂರು ಜಿಲ್ಲೆಯಲ್ಲಿ 157 ಕೋಟಿ ರೂ. ವೆಚ್ಚದಲ್ಲಿ 45 ಕಿ.ಮೀ., ಯಾದಗಿರಿಯಲ್ಲಿ 1,600 ಕೋಟಿ ರೂ. ವೆಚ್ಚದಲ್ಲಿ 65 ಕಿ.ಮೀ. ಹೆದ್ದಾರಿ ನಿರ್ಮಾಣ ಮಾಡಲಾಗುತ್ತಿದೆ. 65 ಕಿ.ಮೀ.ನ ಅಕ್ಕಲಕೋಟೆ ಕರ್ನೂಲ್ ಹೆದ್ದಾರಿ ಹಾಗೂ 4.5 ಕಿ.ಮೀ.ನ ಬಸವಂತಪುರದಿಂದ ಸಿಂಗನೋಡಿ ಕಾಮಗಾರಿಗಳು ಶೇ.58ರಷ್ಟು ಪೂರ್ಣಗೊಂಡಿದೆ.
ಕೃಷ್ಣಾ ನದಿಗೆ ನಿರ್ಮಾಣ ಮಾಡಲಾಗುತ್ತಿರುವ ಸೇತುವೆ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರು ನಿಧನರಾಗಿದ್ದಾರೆ. ಏಜೆನ್ಸಿ ಬದಲಾವಣೆ ಮಾಡಿ ಶೀಘ್ರಗತಿಯಲ್ಲಿ ಕಾಮಗಾರಿ ನಡೆಸುವಂತೆ ಸೂಚಿಸಲಾಗಿದೆ. ಹುನಗುಂದ -ಬಾಗಲಕೋಟೆ, ಹುನಗುಂದ-ರಾಯಚೂರು ಕಾಮಗಾರಿಗಳು ಪ್ರಗತಿಯಲ್ಲಿವೆ.
ಯಾದಗಿರಿ ಜಿಲ್ಲೆಯಲ್ಲಿ ಜಲಧಾರೆ ಯೋಜನೆಗೆ 2,400 ಕೋಟಿ ರೂ. ಹಾಗೂ ರಾಯಚೂರು ಜಿಲ್ಲೆಗೆ 2,800 ಕೋಟಿ ರೂ. ಅನುದಾನ ಮಂಜೂರಾಗಿದೆ. ಕೇಂದ್ರ ಸರ್ಕಾರ ಜಿಲ್ಲೆಗೆ ಹೆಚ್ಚಿನ ಅನುದಾನ ನೀಡಿದೆ ಎಂದು ರಾಜಾ ಅಮರೇಶ್ವರ ನಾಯಕ ತಿಳಿಸಿದರು.
ಈ ಸಂದರ್ಭದಲ್ಲಿ ಆರ್‌ಡಿಎ ಮಾಜಿ ಅಧ್ಯಕ್ಷ ರಾಜಕುಮಾರ, ಜಿ.ಪಂ. ಮಾಜಿ ಸದಸ್ಯ ಸತೀಶಕುಮಾರ, ವಕ್ ಬೋರ್ಡ್ ಮಾಜಿ ಅಧ್ಯಕ್ಷ ಮುಕ್ತಿಯಾರ್, ಬಿಜೆಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವಿಜಯರಾಜೇಶ್ವರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಕಾರದ ಅಕಾರಿಗಳು ಉಪಸ್ಥಿತರಿದ್ದರು.