Vijayaratna Award 2025 : ಕನ್ನಡಿಗ ಉದ್ಯಮಿಯೊಬ್ಬರು ತಮ್ಮ ಸ್ವಂತ ಪರಿಶ್ರಮದಿಂದ ಹುಟ್ಟುಹಾಕಿರುವ ಕಂಪನಿಯೊಂದು ಈಗ ದಕ್ಷಿಣ ಭಾರತದೆಲ್ಲೆಡೆ ಹಲವು ಶಾಖೆಗಳಾಗಿ ವಿಸ್ತರಣೆಗೊಂಡು ಗ್ರಾಹಕರ ವಿಶ್ವಾಸ ಗಳಿಸಿದೆ. ಐದು ವರ್ಷದ ಹಿಂದೆ ಸ್ಥಾಪಿಸಿದ ಈ ಕಂಪನಿಯು ಪ್ರಸ್ತುತ ಲಕ್ಷಾಂತರ ಜನರ ನೆರವಿಗೆ ಧಾವಿಸಿ ಮೆಚ್ಚುಗೆ ಪಡೆದಿದೆ. ಇಂತಹದ್ದೊಂದು ವಿಶ್ವಾಸಾರ್ಹ ಕಂಪನಿಯಾದ ‘ಬೆನಕ ಗೋಲ್ಡ್’ ಅನ್ನು ಆರಂಭಿಸಿದ ಕೀರ್ತಿ ಭರತ್ಕುಮಾರ್ ಮುಡಿಗೇರಿದೆ. ನಾಗರಿಕರು ತಮ್ಮ ಮಕ್ಕಳ ವ್ಯಾಸಂಗಕ್ಕಾಗಿ, ಮದುವೆಗಾಗಿ, ಮನೆ ಖರೀದಿಸಲು ಆಭರಣಗಳನ್ನು ಗಿರವಿ ಇರಿಸಿಕೊಂಡು ಮೌಲ್ಯಯುತ ಬೆಲೆ ನಿರ್ಧರಿಸುವಲ್ಲಿ ಕಂಪನಿಯು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಬೇರೆಡೆ ಗಿರವಿ ಇಟ್ಟ ಒಡವೆಗಳನ್ನು ಬಿಡಿಸಿಕೊಟ್ಟು ಉಳಿದ ಹಣವನ್ನು ಗ್ರಾಹಕರಿಗೆ ಹಸ್ತಾಂತರಿಸುವ ವಿಧಾನ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿದೆ. ಕಂಪನಿಯಿಂದ ಬಂದಂತಹ ಲಾಭದಲ್ಲಿ ಸಮಾಜಸೇವೆ ನಡೆಸುವಲ್ಲಿಯೂ ಭರತ್ಕುಮಾರ್ ಗಮನ ಸೆಳೆದಿದ್ದಾರೆ. ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ. ಗೋಶಾಲೆಗಳಿಗೂ ಯಥೇಚ್ಛ ನೆರವು ನೀಡಿ ಆ ಕ್ಷೇತ್ರದಲ್ಲಿ ಗುರುತರವಾದ ಹೆಜ್ಜೆ ಇರಿಸಿದ್ದಾರೆ. ಮಹಿಳಾ ಸಬಲೀಕರಣದಲ್ಲೂ ಛಾಪು ಮೂಡಿಸಿರುವ ಉದ್ಯಮಿ ಭರತ್ಕುಮಾರ್ ಔದಾರ್ಯಕ್ಕೂ ಹೆಸರು ಪಡೆದಿದ್ದಾರೆ.
ಸಾಧಕರ ಹಾದಿ ಹೂವಿನ ಹಾಸಿಗೆಯಾಗಿರುವುದಿಲ್ಲ ಎಂಬುದು ಬಹುತೇಕ ಸಾಧಕರ ಜೀವನಗಾಥೆಯನ್ನು ಕೇಳಿದಾಗ ಸತ್ಯ ಎನಿಸುತ್ತದೆ. ತಾವು ಜೀವನದಲ್ಲಿ ಅನುಭವಿಸಿದ ನೋವುಗಳೇ ಸಾಧನೆಗೆ ಪ್ರೇರಣೆ ನೀಡುತ್ತವೆ. ಅಂತೆಯೇ 2025ನೇ ಸಾಲಿನ ವಿಜಯವಾಣಿ ‘ವಿಜಯ ರತ್ನ’ ಪ್ರಶಸ್ತಿಗೆ ಭಾಜನರಾಗಿರುವ ಬೆನಕ ಗೋಲ್ಡ್ ಕಂಪನಿಯ ಸಂಸ್ಥಾಪಕ ಎಸ್. ಭರತ್ ಕುಮಾರ್ ನಡೆದು ಬಂದ ಹಾದಿ ರೋಚಕತೆಯಿಂದ ಕೂಡಿದೆ.
ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನಕಪುರದಲ್ಲಿ ಹುಟ್ಟಿದ ಭರತ್ ಕುಮಾರ್ ಪ್ರಾಥಮಿಕ ಶಿಕ್ಷಣವನ್ನು ಅಲ್ಲಿಯೇ ಪಡೆದು ನಂತರ ಬೆಂಗಳೂರಿನಲ್ಲಿ ಪ್ರೌಢ ಮತ್ತು ಪಿಯುಸಿ ಶಿಕ್ಷಣವನ್ನು ಪೂರ್ಣಗೊಳಿಸಿದರು. ಬೆಂಗಳೂರಿನ ಆದರ್ಶ ಕಾಲೇಜಿನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಮುಡಿಗೇರಿಸಿಕೊಂಡರು. ಹೀಗೆ ತಮ್ಮ ವಿದ್ಯಾಭ್ಯಾಸದ ವೇಳೆ ಹಣಕಾಸಿನ ತೊಂದರೆಯಾಗಿ ತಮ್ಮ ತಾಯಿಯ ಒಡವೆಯನ್ನು ಗಿರವಿ ಇಟ್ಟು ವ್ಯಾಸಂಗ ಮುಂದುವರಿಸಿದರು. ವಿದ್ಯಾಭ್ಯಾಸದ ನಂತರ ಆ ಒಡವೆಯನ್ನು ಬಿಡಿಸಿಕೊಳ್ಳುವುದಕ್ಕೆ ಹೋದಾಗ ಆಭರಣವು ಹರಾಜಾಗಿರುವುದು ತಿಳಿಯುತ್ತದೆ. ಆಗಲೇ ಭರತ್ ಕುಮಾರ್ ನಿರ್ಧಾರ ಮಾಡುತ್ತಾರೆ. ನನ್ನ ಹಾಗೆ ಕಷ್ಟದಲ್ಲಿದ್ದು, ಬಂಗಾರವನ್ನು ಗಿರವಿ ಇಟ್ಟವರು ತಮ್ಮ ಬಂಗಾರ ಕಳೆದುಕೊಳ್ಳಬಾರದು. ಅವರ ನೆರವಿಗೆ ತಾನು ನಿಲ್ಲಬೇಕೆಂದರೆ ಗೋಲ್ಡ್ ಕಂಪನಿ ತೆರೆಯಬೇಕು ಎಂದು ನಿರ್ಧರಿಸುತ್ತಾರೆ. ಅದರಿಂದ ಸಾಕಾರಗೊಂಡಿದ್ದೇ ಬೆನಕ ಗೋಲ್ಡ್ ಕಂಪನಿ ಎಂಬುದನ್ನು ಭರತ್ ವಿವರಿಸಿದ್ದಾರೆ.
ಯಾವುದೇ ಬ್ಯುಸಿನೆಸ್ ಸ್ಟ್ಯಾಂಡ್ ಮಾಡುವುದು ಅಷ್ಟು ಸುಲಭವಲ್ಲ. ಸಮಯ ಪಾಲನೆ, ಶಿಸ್ತು, ಬದ್ಧತೆ, ಪರಿಶ್ರಮದಿಂದ ದುಡಿದರೆ ಯಶಸ್ಸು ಖಂಡಿತ ಎಂಬುದು ಭರತ್ ಅನುಭವದ ಮಾತು. ಯಾರು ನಮ್ಮ ಬಗ್ಗೆ ನೆಗೆಟಿವ್ ಮಾತಾನಾಡಿರುತ್ತಾರೋ ಅವರಿಂದಲೇ ಭೇಷ್ ಎನ್ನಿಸಿಕೊಳ್ಳುವುದೇ ನಿಜವಾದ ಸಾಧನೆ. ‘ಯಶಸ್ಸು ಬೇಕೆಂದರೆ ಕನಸುಗಳ ಮೇಲೆ ಸಂದೇಹವಿರಬಾರದು’. ಗುರಿ ತಲುಪುವ ಹಾದಿ ಎಷ್ಟೇ ದುರ್ಗಮವಾಗಿದ್ದರೂ, ಗುರಿ ತಲುಪಲೇ ಬೇಕೆಂಬ ದೃಢ ಸಂಕಲ್ಪವಿರಬೇಕೆಂಬ ಧ್ಯೇಯವನ್ನು ಮೈಗೂಡಿಸಿಕೊಂಡವನಿಗೆ ಯಾವ ಅಡಚಣೆಯೂ ಸವಾಲಾಗಲಾರದು. ಈ ಮಾತಿಗೆ ಉದಾಹರಣೆಯಂತೆ ಸಾಧಿಸಿ ತೋರಿಸಿದವರಲ್ಲಿ ಭರತ್ ಕುಮಾರ್ ಕೂಡ ಒಬ್ಬರು. ಯುವಕರು ಬೇರೆಯವರನ್ನು ಅನುಸರಿಸಿ ತಮ್ಮ ಸಮಯ ವ್ಯರ್ಥ ಮಾಡಿಕೊಳ್ಳದೇ, ತಮ್ಮನ್ನು ಇತರರು ಅನುಸರಿಸುವಂತೆ ಮಾದರಿಯಾಗಿ ಮುಂದೆ ಸಾಗಬೇಕು. ಆಗ ಮಾತ್ರ ಬದುಕಿನಲ್ಲಿ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯ ಎಂದು ಭರತ್ ಕುಮಾರ್ ಪ್ರತಿಪಾದಿಸುತ್ತಾರೆ.
2020ರಲ್ಲಿ ಸ್ಥಾಪನೆಗೊಂಡಿರುವ ಬೆನಕ ಗೋಲ್ಡ್ ಕಂಪನಿಯ ಯಶಸ್ಸಿನ ಹಿಂದೆ 15 ವರ್ಷಗಳ ಪರಿಶ್ರಮವಿದೆ. ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ನಮ್ಮ ಶಾಖೆಗಳಿದ್ದು, ಮುಂದಿನ ದಿನಗಳಲ್ಲಿ ಎಲ್ಲ ತಾಲ್ಲೂಕು ಮತ್ತು ಪಂಚಾಯಿತಿ ಮಟ್ಟದಲ್ಲಿ ನಮ್ಮ ಶಾಖೆಯನ್ನು ತೆರೆಯುವ ಗುರಿ ಇರಿಸಿಕೊಂಡಿದ್ದೇವೆ. ಗೋಲ್ಡ್ ಕಂಪನಿಗಳು ಬಂಗಾರವನ್ನು ಮಾರಾಟ ಮಾಡುವಂತೆ ಪ್ರೇರೇಪಿಸುತ್ತಿವೆ. ನಮ್ಮ ಕಂಪನಿ ಗ್ರಾಹಕರ ಬಂಗಾರವನ್ನು ಉಳಿಸುವುದಕ್ಕೆ ಹೆಚ್ಚು ಗಮನ ನೀಡುತ್ತಿದೆ. ಆದ್ದರಿಂದ ಸೇಲ್ ಆಂಡ್ ಸೇವ್ ಯೋಜನೆಯನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳಬೇಕು. | ಭರತ್ ಕುಮಾರ್ ಎಸ್ ಬೆನಕ ಗೋಲ್ಡ್ ಕಂಪನಿ ಸಂಸ್ಥಾಪಕರು
ವಿಜಯವಾಣಿ ನನ್ನ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸಿದ್ದು, 13 ವರ್ಷಗಳ ಹಿಂದೆ ಪತ್ರಿಕೆಯ ಏಜೆನ್ಸಿ ಪಡೆದು ದುಡಿಮೆ ಆರಂಭಿಸಿದ್ದನ್ನು ಭರತ್ ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಅಂದು ಡಾ. ವಿಜಯ ಸಂಕೇಶ್ವರ ಅವರು ಆಡಿದ ಮಾತುಗಳು, ನಂತರ ಡಾ. ಆನಂದ ಸಂಕೇಶ್ವರ ಅವರೊಂದಿಗಿನ ಒಡನಾಟ ಹಾಗೂ ಕಂಪನಿಯ ಪ್ರಗತಿಯಲ್ಲಿ ವಿಜಯವಾಣಿ ಪಾತ್ರವನ್ನು ಮನಸಾರೆ ಸ್ಮರಿಸುತ್ತಾರೆ. ವಿಜಯವಾಣಿ ಸಂಸ್ಥೆ ನೀಡುತ್ತಿರುವ ವಿಜಯ ರತ್ನ ಪ್ರಶಸ್ತಿ ಬಹಳ ಖುಷಿ ತಂದಿದ್ದು, ಯಾವುದೇ ಸಂಸ್ಥೆಯ ಯಶಸ್ಸಿಗೆ ಅಲ್ಲಿನ ಸಿಬ್ಬಂದಿಗಳ ಶ್ರಮ ಪ್ರಮುಖವಾಗಿದ್ದು ನನಗೆ ಬಂದಿರುವ ಈ ಪ್ರಶಸ್ತಿಯನ್ನು ನಮ್ಮ ಸಂಸ್ಥೆಯ ಸಿಬ್ಬಂದಿಗಳಿಗೆ ಅರ್ಪಿಸುತ್ತೇನೆ ಎಂದು ಭರತ್ ಕುಮಾರ್ ಔದಾರ್ಯ ಮೆರೆದಿದ್ದಾರೆ.
ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಬೆನಕ ಗೋಲ್ಡ್ ಕಂಪನಿಯನ್ನು ಗ್ರಾಹಕರು ಏಕೆ ಆಯ್ಕೆ ಮಾಡಿಕೊಳ್ಳಬೇಕು ಎಂಬುದಕ್ಕೆ ಭರತ್ ಬಳಿ ಮ್ಯಾಥಮೆಟಿಕಲ್ ಉತ್ತರವಿದೆ. ಬಂಗಾರದಲ್ಲಿ ‘ಹೊಸ ಬಂಗಾರ’ ಎಂಬ ಪರಿಕಲ್ಪನೆ ಇಲ್ಲ. ಹೊಸ ಆಭರಣ ಮಾತ್ರ ಇರುತ್ತದೆ. ಕಾರಣ ಖರೀದಿ ಮಾಡಿದ ಹಳೇ ಬಂಗಾರವನ್ನೇ ಕರಗಿಸಿ 999 ಪ್ಯೂರಿಟಿಯಲ್ಲಿ ಬಿಸ್ಕೆತ್ ತಯಾರಿಸಿ ಅದರಿಂದ ಹೊಸ ಆಭರಣವನ್ನು ತಯಾರಿಸುತ್ತಾರೆ. ಹೀಗೆ ಮಾಡುವ ಪ್ರಕ್ರಿಯೆಯಿಂದ ಬಂಗಾರದ ಬೆಲೆ ಪ್ರತಿ ಬಾರಿಯೂ ಹೆಚ್ಚಾಗುತ್ತದೆ. ಆದ್ದರಿಂದ ಕಷ್ಟ ಬಂದಾಗ ಬಂಗಾರ ಮಾರಾಟ ಮಾಡಿ ನಂತರ ಹೊಸದಾಗಿ ಖರೀದಿಸಬೇಕೆಂದರೆ ಅದೇ ಆಭರಣಕ್ಕೆ ಶೇ.35ರಷ್ಟು ಹೆಚ್ಚಿಗೆ ಹಣವನ್ನು ಪಾವತಿಸಬೇಕಾಗುತ್ತದೆ. ಬೆನಕ ಗೋಲ್ಡ್ ಕಂಪನಿ ಪರಿಚಯಿಸಿರುವ ಸೇಲ್ ಆಂಡ್ ಸೇವ್ ಯೋಜನೆಯಿಂದ ಆ ಹಣ ಉಳಿತಾಯ ಮಾಡಬಹುದು.ಶೇ.60 ಹಣಕ್ಕೆ ಗಿರವಿ ಇಟ್ಟ ಬಂಗಾರವನ್ನು ಬಡ್ಡಿ ಹೆಸರಿನಲ್ಲಿ ಶೇ.100 ಮೌಲ್ಯಕ್ಕೆ ಸರಿದೂಗಿಸಿ ಹರಾಜು ಹಾಕುವುದನ್ನು ತಪ್ಪಿಸಿ ಬೆನಕ ಗೋಲ್ಡ್ ಕಂಪನಿಯಲ್ಲಿ ಜರ್ಮನ್ ತಂತ್ರಜ್ಞಾನದಿಂದ ಚಿನ್ನದ ಮೌಲ್ಯಮಾಪನ ಮಾಡಿ ಶೇ.100ರವರೆಗೆ ಖಾತರಿ ಬೆಲೆ ನೀಡಲಾಗುತ್ತದೆ. ಆಸ್ತಿ ಖರೀದಿ, ಮನೆ ನಿರ್ವಣ, ಮಕ್ಕಳ ವಿದ್ಯಾಭ್ಯಾಸ ಇತ್ಯಾದಿ ಅವಶ್ಯಕತೆ ಮತ್ತು ಅನಿವಾರ್ಯತೆಗಳನ್ನು ಬೆನಕ ಗೋಲ್ಡ್ ಕಂಪನಿ ಪೂರೈಸಲಿದೆ. ಬೇರೆಡೆ ಗಿರವಿ ಇಟ್ಟ ಬಂಗಾರವನ್ನು ಬಿಡಿಸಿ ಮಿಕ್ಕಿದ ಹಣವನ್ನು ಗ್ರಾಹಕರಿಗೆ ಸ್ಥಳದಲ್ಲೇ ನೀಡಲಾಗುತ್ತದೆ. ಅಥವಾ ಗ್ರಾಹಕರು ಕಂತಿನ ಮೂಲಕ ಹಣವನ್ನು ಪಾವತಿಸಿ ತಮ್ಮ ಚಿನ್ನವನ್ನು ವಾಪಸ್ಸು ಪಡೆದುಕೊಳ್ಳಬಹುದಾಗಿದೆ. ಇದರಿಂದ ಆರ್ಥಿಕ ಸಂಕಷ್ಟಕ್ಕೊಳಗಾಗಿ ಹರಾಜಿನಲ್ಲಿ ತಮ್ಮ ಬಂಗಾರವನ್ನು ಕಳೆದುಕೊಳ್ಳುವುದರಿಂದ ಗ್ರಾಹಕರನ್ನು ಪಾರು ಮಾಡಲು ಬೆನಕ ಗೋಲ್ಡ್ ಮಧ್ಯಸ್ಥಿಕೆ ವಹಿಸುತ್ತಿದೆ.
ಗೋಲ್ಡ್ ಕಂಪನಿಗಳು ಕೇವಲ ಗ್ರಾಹಕರ ಬಂಗಾರವನ್ನು ಮಾರಾಟ ಮಾಡಲು ಜಾಹೀರಾತು ನೀಡುತ್ತವೆ. ಆದರೆ ಬೆನಕ ಗೋಲ್ಡ್ ಕಂಪನಿಯು ಗ್ರಾಹಕರ ಚಿನ್ನವನ್ನು ಉಳಿಸುವುದಕ್ಕೆ ಜಾಹೀರಾತು ನೀಡುತ್ತಿದೆ. ಭರತ್ ಕುಮಾರ್ ಅವರು ಯುವ ಉದ್ಯಮಿಗಳಾಗಿ ಗ್ರಾಹಕರ ವಿಶ್ವಾಸ ಗಳಿಸಿದ್ದಾರೆ. ಇವರ ನೈತಿಕತೆ ನನ್ನ ಮನಸ್ಥಿತಿಗೆ ಮ್ಯಾಚ್ ಆಗಿದೆ. ಆದ್ದರಿಂದ ನಾನು ಬೆನಕ ಗೋಲ್ಡ್ ಕಂಪನಿಯ ರಾಯಭಾರಿಯಾಗಿದ್ದೇನೆ. | ರೀಷ್ಮಾ ನಾಣಯ್ಯ ಬೆನಕ ಗೋಲ್ಡ್ ಕಂಪನಿ ರಾಯಭಾರಿ
ಸಾಮಾನ್ಯವಾಗಿ ವ್ಯವಹಾರ ನಡೆಸುವ ಪುರುಷರು ಮನೆಯಲ್ಲಿರುವ ಮಹಿಳೆಯರ ಜತೆ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಯಾವುದೇ ಚರ್ಚೆ ನಡೆಸುವುದಿಲ್ಲ. ಆದರೆ, ಭರತ್ ಕುಮಾರ ಹೇಳುವ ಪ್ರಕಾರ ಮಹಿಳೆಯರಲ್ಲಿ ವಿಶೇಷ ಶಕ್ತಿ ಮತ್ತು ಜ್ಞಾನ ಇರುತ್ತೆ. ಅವರೊಂದಿಗೆ ರ್ಚಚಿಸಿದರೆ ಅಪರೂಪದ ವಿಷಯ, ಸಲಹೆಗಳು ದೊರೆಯುತ್ತವೆ. ನನ್ನ ಈ ಸಾಧನೆಯ ಹಿಂದೆ ನನ್ನ ಪತ್ನಿ ಬಿಂದು ಸಹಕಾರ, ಸಲಹೆ, ಮಾರ್ಗದರ್ಶನವಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಪ್ರೇಮ ವಿವಾಹವಾಗಿರುವ ಭರತ್ ಮತ್ತು ಬಿಂದು ಅವರಿಗೆ ಜಶ್ವಿಕ್ ಎಂಬ 5 ವರ್ಷದ ಮಗ, ಭೂಮಿಕ ಎಂಬ 3 ವರ್ಷದ ಮಗಳಿದ್ದಾಳೆ. ಭರತ್ ತಂದೆ ಕೃಷಿಕರಾಗಿದ್ದು, ತಾಯಿ ಗೃಹಿಣಿಯಾಗಿದ್ದಾರೆ. ತಮ್ಮ ಎಲ್ಲ ಕೆಲಸಗಳಿಗೆ ಕುಟುಂಬ ಸದಸ್ಯರ ಸಹಕಾರ ಮತ್ತು ಬೆಂಬಲವಿರುವುದನ್ನು ಭರತ್ ಕುಮಾರ್ ಭಾವನಾತ್ಮಕವಾಗಿ ಸ್ಮರಿಸಿಕೊಳ್ಳುತ್ತಾರೆ.
2020ರಲ್ಲಿ ಬೆನಕ ಗೋಲ್ಡ್ ಕಂಪನಿ ಸ್ಥಾಪಿಸಿದ ಭರತ್ ಕುಮಾರ್ ಕೇವಲ ಐದು ವರ್ಷದಲ್ಲಿ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಶಾಖೆಗಳನ್ನು ತೆರೆದಿದ್ದಾರೆ. ಒಟ್ಟು 40 ಶಾಖೆಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, 300ಕ್ಕೂ ಹೆಚ್ಚಿನ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ದಕ್ಷಿಣ ಭಾರತಕ್ಕೆ ಸೀಮಿತವಾಗಿರುವ ಬೆನಕ ಗೋಲ್ಡ್ ಕಂಪನಿಯನ್ನು ಮುಂಬರುವ ದಿನಗಳಲ್ಲಿ ಭಾರತದಾದ್ಯಂತ ವಿಸ್ತರಿಸಿ 100 ಶಾಖೆಗಳನ್ನು ತೆರೆಯುವ ಗುರಿ ಇರಿಸಿಕೊಂಡಿದ್ದಾರೆ. ದಕ್ಷಿಣ ಭಾರತದ ನಂ.1 ಗೋಲ್ಡ್ ಕಂಪನಿಯಾಗಿರುವ ಬೆನಕ ಗೋಲ್ಡ್ ಕಂಪನಿಯು ಚಿನ್ನದ ಕ್ರಾಂತಿಯನ್ನು ಮಾಡಿದೆ. ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಾದ್ಯಂತ ಶಾಖೆಗಳನ್ನು ಹೊಂದಿರುವ ಬೆನಕ ಗೋಲ್ಡ್ ಕಂಪನಿಯ ಪ್ರಧಾನ ಕಚೇರಿ ಬೆಂಗಳೂರಿನ ಬಸವನಗುಡಿಯ ಗಾಂಧಿ ಬಜಾರ್ ಸಮೀಪದ ನೆಟ್ಟಕಲ್ಲಪ್ಪ ವೃತ್ತದಲ್ಲಿದೆ.
ಗಣಪತಿಯನ್ನು ಭಕ್ತಿಯಿಂದ ಆರಾಧಿಸುವ ಭರತ್ ಕುಮಾರ್ ತಮ್ಮ ಪುತ್ರನಿಗೆ ಬೆನಕ ಎಂಬ ಹೆಸರಿಡುವ ಅಪೇಕ್ಷೆ ಹೊಂದಿದ್ದರು. ಆದರೆ, ಕಾರಣಾಂತರದಿಂದ ಅದು ಸಾಧ್ಯವಾಗದಿದ್ದಕ್ಕೆ ಅವರು ತಮ್ಮ ಕನಸಿನ ಕಂಪನಿಗೆ ಯಾವುದೇ ವಿಘ್ನ ಎದುರಾಗಬಾರದೆಂದು ಅದೇ ಹೆಸರನ್ನು ಇಟ್ಟರು. ದೇವರ ಆಶೀರ್ವಾದ ಎಂಬಂತೆ ಗಣಪತಿ ದೇವಾಲಯದ ಮುಂಭಾಗದಲ್ಲೇ ಮೊದಲನೇ ಶಾಖೆ ಆರಂಭಿಸಲು ಅವಕಾಶ ದೊರೆಯಿತು. ಗಣಪತಿ ಮಾತ್ರವಲ್ಲದೆ ಭರತ್ ಕುಮಾರ್ ಕಲಿಯುಗ ಕಾಮಧೇನು ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಹಾಗೂ ತ್ರಿಮೂರ್ತಿ ಅವತಾರ ಗಾಣಗಾಪುರದ ಶ್ರೀ ದತ್ತಾತ್ರೆಯ ಸ್ವಾಮಿಯ ಆರಾಧಕರಾಗಿದ್ದು, ದೈವಕೃಪೆ ಇಲ್ಲದೆ ಯಾವುದೇ ಕೆಲಸದಲ್ಲೂ ಯಶಸ್ಸು ಪಡೆಯಲು ಸಾಧ್ಯವಿಲ್ಲ ಎಂದು ನಂಬಿದ್ದಾರೆ. ಹಲವು ಖ್ಯಾತನಾಮರ ರಾಯಭಾರತ್ವದಲ್ಲಿ ಯಶಸ್ಸು ಗಳಿಸಿರುವ ಸಂಸ್ಥೆಯ ನೂತನ ರಾಯಭಾರಿಯಾಗಿ ಯುವನಟಿ ರೀಷ್ಮಾ ನಾಣಯ್ಯ ಹೊಸ ಸ್ವರೂಪದ ಜಾಹೀರಾತುಗಳ ಮೂಲಕ ಯುವಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬೆನಕ ಗೋಲ್ಡ್ ಕಂಪನಿಯಲ್ಲಿ 300 ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದೇವೆ. ಎಂಡಿಯವರಾದ ಭರತ್ ಕುಮಾರ್ ಅವರು ಎಲ್ಲರ ಬಗ್ಗೆ ಕಾಳಜಿ ವಹಿಸುತ್ತಾರೆ. ಯಾರಿಗೂ ಯಾವುದೇ ಸಮಸ್ಯೆಯಾದರೂ ತಾವೇ ಸ್ವತಃ ಅದನ್ನು ಪರಿಹರಿಸಲು ಮುಂದಾಗುತ್ತಾರೆ. ಸಿಬ್ಬಂದಿ ಕಷ್ಟಕ್ಕೆ ಸ್ಪಂದಿಸುವುದೇ ನಿಜವಾದ ನಾಯಕನ ಗುಣ. ಸಾಮಾನ್ಯ ಉದ್ಯೋಗಿಯಾಗಿದ್ದ ನನ್ನನ್ನು ಸಿಒಒ ಸ್ಥಾನಕ್ಕೆ ಕೂರಿಸಿದ್ದಾರೆ. ಕೆಲಸಗಾರರಿಗೆ ಅವಕಾಶ ನೀಡುವ ಅವರ ಔದಾರ್ಯಕ್ಕೆ ಇದು ಸಾಕ್ಷಿ. | ನಾಗರಾಜನ್ ಬೆನಕ ಗೋಲ್ಡ್ ಕಂಪನಿ ಸಿಒಒ ಗ್ರಾಹಕರು ಬಂದಾಗ ಭರತ್ ಕುಮಾರ್ ಸರ್ ಕೇವಲ ವ್ಯಾಪಾರದ ದೃಷ್ಟಿಯಿಂದ ಮಾತನಾಡದೆ, ಅವರ ಕಷ್ಟಕ್ಕೆ ಸ್ಪಂದಿಸಿ ಅವರಿಗೆ ಸಹಾಯವಾಗುವ ಸಲಹೆಗಳನ್ನು ನೀಡಿ ಸಂತೈಸುತ್ತಾರೆ. ಅವರ ಆ ಚಿಂತನೆಗಳೇ ಚಿನ್ನವನ್ನು ಮಾರಾಟ ಮಾಡಿದ ನಂತರ ಮರಳಿ ಪಡೆಯುವ ಸ್ಕೀಂ ರೂಪಿಸಲು ಸಾಧ್ಯವಾಗಿದೆ. ಸಿಬ್ಬಂದಿಗಳನ್ನು ತಮ್ಮ ಕುಟುಂಬದ ಸದಸ್ಯರಂತೆ ಪ್ರೀತಿಯಿಂದ ಕಾಣುತ್ತಾರೆ. | ಗಿರೀಶ್ ಬೆನಕ ಗೋಲ್ಡ್ ಕಂಪನಿ ಅಕೌಂಟೆಂಟ್
ಬಂಗಾರ ಎಂಬುದು ಕಲಿಗಾಲದ ಮಾಯಾಜಾಲದಂತೆ. ಬಡವನಿರಲಿ, ಶ್ರೀಮಂತನಿರಲಿ, ಮಧ್ಯಮ ವರ್ಗದವನಿರಲಿ ಎಲ್ಲರಿಗೂ ಬಂಗಾರದ ವ್ಯಾಮೋಹ ಇದ್ದೇ ಇರುತ್ತದೆ. ಅವರವರ ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಚಿನ್ನ ಖರೀದಿಸುತ್ತಾರೆ. ಬಂಗಾರದ ಮೇಲಿನ ಹೂಡಿಕೆ, ಮಾರಾಟ, ಗಿರವಿ ಇವೆಲ್ಲವೂ ಸಾಮಾನ್ಯ. ಕಷ್ಟಕಾಲದಲ್ಲಿ ಸಹಾಯವಾಗುತ್ತದೆ ಎಂಬ ಕಾರಣಕ್ಕೆ ಈ ಹಳದಿ ಲೋಹ ಖರೀದಿಸುವವರೂ ಇದ್ದಾರೆ. ಹಾಗೆ ಕಷ್ಟ ಬಂದಾಗ ಒಮ್ಮೆ ಬಂಗಾರವನ್ನು ಮಾರಾಟ ಮಾಡಿದ ಮೇಲೆ ಅದರ ನೆನಪು ಮಾತ್ರ ಉಳಿಯುತ್ತದೆ. ಆದರೆ, ಬೆನಕ ಗೋಲ್ಡ್ ಕಂಪನಿಯ ಸಂಸ್ಥಾಪಕ ಎಸ್.ಭರತ್ ಕುಮಾರ್ ಭಾರತದ ಸುವರ್ಣ ಮಾರುಕಟ್ಟೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಷ್ಟದಲ್ಲಿ ಮಾರಾಟ ಮಾಡಿದ ಬಂಗಾರವನ್ನು ಕಷ್ಟ ಕಳೆದ ನಂತರ ಮರಳಿ ಪಡೆಯುವ ವಿನೂತನ ಯೋಜನೆಯನ್ನು ಘೋಷಿಸಿದ್ದಾರೆ. ಚಿನ್ನವನ್ನು ಖರೀದಿಸಿದವರು ತಮ್ಮ ಕಷ್ಟದ ಸಂದರ್ಭದಲ್ಲಿ ಅದನ್ನು ಮಾರಾಟ ಮಾಡುತ್ತಾರೆ. ಹೀಗೆ ಮಾರಾಟ ಮಾಡುವಾಗ ಭಾವನಾತ್ಮಕವಾಗಿ ನೋವು ಅನುಭವಿಸುತ್ತಾರೆ. ಅಂತಹವರ ಭಾವನೆಗಳನ್ನು ಗೌರವಿಸಿ ಮಾರಾಟ ಮಾಡಿದ ಬಂಗಾರವನ್ನು ಮರಳಿ ನೀಡುವ ವಿಶೇಷ ಪರಿಕಲ್ಪನೆಯನ್ನು ಭರತ್ ಕುಮಾರ್ ರೂಪಿಸಿದ್ದಾರೆ. ಈ ಯೋಜನೆಗೆ ಸೇಲ್ ಆಂಡ್ ಸೇವ್ ಎಂದು ಹೆಸರಿಸಲಾಗಿದ್ದು, ಮಾರಾಟ ಮಾಡಿ ಮತ್ತು ನಿಮ್ಮ ಆಭರಣಗಳನ್ನು ಉಳಿಸಿ ಎಂಬುದು ಈ ಯೋಜನೆಯ ಉದ್ದೇಶ. ಈ ಹಿಂದೆ ಕೂಡಾ ಭರತ್ ಕುಮಾರ್ ತಮ್ಮ ಕಂಪನಿಯಲ್ಲಿ ಸ್ಟೋನ್ ಫಾರ್ ವ್ಯಾಲ್ಯೂ ಎಂಬ ವಿನೂತನ ಕೊಡುಗೆ ಘೋಷಿಸಿದ್ದರು. ಮಾರುಕಟ್ಟೆಯಲ್ಲೇ ಮೊದಲ ಬಾರಿಗೆ ಆಭರಣಗಳಲ್ಲಿರುವ ಹರಳುಗಳಿಗೂ ಬೆಲೆ ನಿಗದಿಗೊಳಿಸಿ ನೀಡುವ ಈ ಯೋಜನೆ ಗ್ರಾಹಕರನ್ನು ಸೆಳೆದಿತ್ತು. ಅದೇ ರೀತಿ ರೆಂಟ್ ಫಾರ್ ಗೋಲ್ಡ್, ರೆಫರ್ ಆಂಡ್ ಅರ್ನ್, ಡೋರ್ ಸ್ಟೆಪ್ ಸರ್ವಿಸ್ ಇತ್ಯಾದಿ ಜನಪ್ರಿಯ ಸ್ಕೀಮ್ಳಿಂದ ಗ್ರಾಹಕರ ಗಮನ ಸೆಳೆದಿದ್ದು ಮಾತ್ರವಲ್ಲ ಚಿನ್ನದ ಕ್ರಾಂತಿಯನ್ನು ಮಾಡಿದ್ದರು.
ವ್ಯವಹಾರಕ್ಕಾಗಿ ಕಂಪನಿಗಳನ್ನು ನೋಂದಾಯಿಸಿಕೊಳ್ಳುವವರು ನಿಯಮದಂತೆ ಸಿಎಸ್ಆರ್ ನಿಧಿಯಿಂದ ಸಾಮಾಜಿಕ ಕಾರ್ಯಗಳನ್ನು ಮಾಡಬೇಕು. ಹಾಗೆಯೇ ಸಾಮಾಜಿಕ ಕೆಲಸ ಮಾಡುವವರು ಅದನ್ನು ದೊಡ್ಡದಾಗಿ ಬಿಂಬಿಸುವವರೆ ಹೆಚ್ಚು. ಬೆನಕ ಗೋಲ್ಡ್ ಕಂಪನಿಯ ಸಂಸ್ಥಾಪಕ ಭರತ್ ಕುಮಾರ್ ಎಲೆಮರೆಯ ಕಾಯಿಯಂತೆ ವಿವಿಧ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ತೆರಿಗೆ ಉಳಿತಾಯಕ್ಕಾಗಿ ಕೊಡುಗೆ ಕೊಡುವುದು ಮುಖ್ಯವಲ್ಲ. ದೇವರು ನಮಗೆ ಸಂಪತ್ತು ಕೊಟ್ಟಾಗ ಅದರ ಒಂದು ಭಾಗವನ್ನು ಸಮಾಜದ ಅರ್ಹರಿಗೆ ನೀಡುವ ಮೂಲಕ ಮಾನವೀಯತೆ ಮೆಚ್ಚುವಂತೆ ಕೆಲಸ ಮಾಡಬೇಕು ಎಂಬುದು ಭರತ್ ಅವರ ಆಶಯವೂ ಹೌದು. ಸರ್ಕಾರಿ ಶಾಲೆಯಲ್ಲಿ ಓದಿ ಈಗ ದೊಡ್ಡ ಸ್ಥಾನ ಗಳಿಸಿರುವ ಭರತ್ಗೆ ಬಡಜನರ ಸಂಕಷ್ಟದ ಅರಿವಿದೆ. ಜತೆಗೆ ಅವರ ಬದುಕಿನ ಬಗ್ಗೆ ಕಾಳಜಿ-ಕನಿಕರವನ್ನು ಹೊಂದಿದ್ದು ಅಂತಹವರ ಕಲ್ಯಾಣಕ್ಕಾಗಿ ಹಲವು ಕೊಡುಗೆಗಳನ್ನು ಈಗಾಗಲೇ ನೀಡಿದ್ದಾರೆ. ವಿವಿಧ ಗೋಶಾಲೆ ಮತ್ತು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅವುಗಳನ್ನು ನಿರ್ವಹಿಸುತ್ತಿದ್ದಾರೆ. ಹಿಂದು ಜೈಭೀಮ್ ಸೇನೆಯ ಮೂಲಕ ಮಹಿಳಾ ಸಬಲೀಕರಣ, ಬಡವರ ಕಲ್ಯಾಣಕ್ಕೆ ಶ್ರಮಿಸುತ್ತಿದ್ದಾರೆ. ಇವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ವಿವಿಧ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಇವರಿಗೆ ಸಂದಿವೆ.