ಬಳ್ಳಾರಿ: ಗಣಿ ಜಿಲ್ಲೆ ಬಳ್ಲಾರಿಯಲ್ಲಿ ಭಾರತ್ ಜೋಡೋ ಯಾತ್ರೆ ಮುಂದುವರಿದಿದೆ. ರವಿವಾರ ಬೆಳಗ್ಗೆ ತಾಲೂಕಿನ ಸಂಗನಕಲ್ ನಿಂದ ಆರಂಭಗೊಂಡಿರುವ ನಾಯಕ ರಾಹುಲ್ ಗಾಂಧಿ ಅವರ ಪಾದಯಾತ್ರೆ ಮೋಕಾದತ್ತ ಪ್ರಯಾಣ ಬೆಳೆಸಿದೆ.
ರವಿವಾರ ಬೆಳಗ್ಗೆ ೭ ಗಂಟೆ ಸುಮಾರಿಗೆ ಆರಂಭಗೊಂಡ ಯಾತ್ರೆ ೩ ಕಿ.ಮೀ. ಕ್ರಮಿಸಿದೆ. ಶಿವಪುರ ಕ್ಯಾಂಪ್ ಸಮೀಪದ ಉಪಾಹಾರಕ್ಕಾಗಿ ವಿಶ್ರಾಂತಿ ನೀಡಿದ್ದು, ಕೆನಾಲ್ ಪಕ್ಕದಲ್ಲೇ ರಾಹುಲ್ ಉಪಾಹಾರ ಸೇವಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಗ್ರಾಮೀಣ ಶಾಸಕ ಬಿ.ನಾಗೇಂದ್ರ ಮತ್ತಿರರು ಇದ್ದರು.