ಜಿಲ್ಲೆ

ಮಾರನಾಮಕರಣ ಇಲ್ಲ, ದೇಶದ ಹೆಸರೇ ಭಾರತ

ಬೆಳಗಾವಿ : ಮರುನಾಮಕರಣ ಎನ್ನುವುದಕ್ಕಿಂತ ನಮ್ಮ ದೇಶದ ಹೆಸರೇ ಭಾರತ. ಬ್ರಿಟಿಷರು ಬಂದ ನಂತರ ಅದನ್ನು ಇಂಡಿಯಾ ಮಾಡಿದರು. ಈಗ ಇಂಡಿಯಾ ಎಂದು ಕರೆಯುವ ಅಗತ್ಯವಿಲ್ಲ. ಮೋಹನ್ ಭಾಗವತ್ ಹೇಳಿಕೆಯನ್ನು ಎಲ್ಲರೂ ಸ್ವಾಗತಿಸುತ್ತೇವೆ’ ಎಂದು ಶಾಸಕ ಅಭಯ ಪಾಟೀಲ ಹೇಳಿದರು.

ದೇಶಕ್ಕೆ ರಿಪಬ್ಲಿಕ್‌ ಆಫ್‌ ಭಾರತ ಎಂದು ಕೇಂದ್ರ ಸರ್ಕಾರ ಮರು ನಾಮಕರಣ ಮಾಡುತ್ತಿರುವ ವಿಚಾರವಾಗಿ, ಇಲ್ಲಿ ಮಂಗಳವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

‘ಬ್ರಿಟಿಷರು ಬಂದ ನಂತರವೇ ದೇಶಕ್ಕೆ ಇಂಡಿಯಾ ಎಂಬ ಹೆಸರು ಬಂದಿದೆ. ಈಗ ಬ್ರಿಟಿಷರು ಹೋಗಿದ್ದಾರೆ. ಆದರೆ, ಇಂಡಿಯಾ ಉಳಿದಿದೆ. ಬ್ರಿಟಿಷರೊಂದಿಗೆ ಅದನ್ನೂ ಕಳುಹಿಸಿಕೊಟ್ಟರೆ ಒಳ್ಳೆಯದು. ಇದು ಉತ್ತಮವಾದ ನಿರ್ಧಾರ’ ಎಂದರು.