ಜಿಲ್ಲೆ

ಒತ್ತಡದ ಬದುಕಿನಿಂದ ಅನಾರೋಗ್ಯ

ಭರಮಸಾಗರ: ಒತ್ತಡದ ಬದುಕಿನ ಶೈಲಿಯಿಂದ ಜನರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚುತ್ತಿವೆ ಎಂದು ಜಿಪಂ ಸದಸ್ಯ ಡಿ.ವಿ.ಶರಣಪ್ಪ ಹೇಳಿದರು.

ಇಲ್ಲಿನ ವಿನಾಯಕ ದೇಗುಲದ ಬಳಿ ಮಂಗಳವಾರ ಕರ್ನಾಟಕ ತಾಂಡಾ ರಕ್ಷಣಾ ವೇದಿಕೆ ಹಾಗೂ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಿಂದ ಆಯೋಜಿಸಿದ್ದ ಆರೋಗ್ಯ ತಪಾಸಣೆ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಕಾಯಿಲೆ ಬಂದ ಆರಂಭದಲ್ಲಿ ಎಚ್ಚರ ವಹಿಸಿ ಚಿಕಿತ್ಸೆ ಪಡೆದರೆ ದೊಡ್ಡ ಸಮಸ್ಯೆಯಿಂದ ಪಾರಾಗಬಹುದು. ಹಳ್ಳಿಗಳಲ್ಲಿ ಜಾಗೃತಿ ಮೂಡಿಸಿ ಆರೋಗ್ಯವಂತ ಸಮಾಜ ನಿರ್ಮಿಸಬೇಕಿದೆ ಎಂದರು.

ತಾಂಡಾ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಜಗದೀಶ್ ನಾಯ್ಕ, ಮುಖಂಡರಾದ ವಸಂತ ನಾಯ್ಕ, ಶಿವಕುಮಾರ್ ನಾಯ್ಕ, ತಾಲೂಕು ಪಂಚಾಯಿತಿ ಸದಸ್ಯ ಎನ್.ಕಲ್ಲೇಶ್ ಇತರರು ಇದ್ದರು.