ಜಿಲ್ಲೆ

ಸಾಮಾನ್ಯರು ಉನ್ನತ ಹುದ್ದೆಗೇರಬಹುದು

Chitradurga

ಭರಮಸಾಗರ: ಸಾಮಾನ್ಯ ವ್ಯಕ್ತಿಯೂ ದೇಶದ ಉನ್ನತ ಪದವಿ ಗಳಿಸಬಹುದು. ಇದು ಸಂವಿಧಾನ ಕೊಟ್ಟಿರುವ ಅವಕಾಶ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಲಿಂಗಪ್ಪ ಹೇಳಿದರು.

ಅರ್ಥಶಾಸ್ತ್ರ ಮತ್ತು ರಾಷ್ಟ್ರೀಯ ಸೇವಾ ಯೊಜನಾ ಘಟಕದ ವತಿಯಿಂದ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಸಂವಿದಾನ ಓದು ಮತ್ತು ಮತದಾರರ ದಿನಾಚರಣೆ ಎಂಬ ವಿಷಯ ಕುರಿತು ಮಾತನಾಡಿದರು.

ಪ್ರೊ.ಸಂಗಮೇಶ್ವರ್ ಮತದಾನ ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರಾಂಶುಪಾಲ ಡಾ.ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ರಾ.ಸೇ.ಯೋ. ಕಾರ್ಯಕ್ರಮಾಧಿಕಾರಿ ಕೆ.ಲೋಕೇಶ ನಾಯ್ಕ ನಿರೂಪಿಸಿದರು. ಡಾ.ಪ್ರವೀಣ್ ಸ್ವಾಗತಿಸಿದರು.