ಭರಮಸಾಗರ: ದೇವರು, ಗುರುಗಳಿಗೆ ಭಕ್ತಿಯನ್ನು ಬಿಟ್ಟು ಬೆರೆಯುವುದು ಬೇಕಾಗಿಲ್ಲ ಎಂದು ಆದೋನಿ ಶ್ರೀ ಶಂಕರಾನಂದ ಮಹಾಸರಸ್ವತಿ ಸಂಸ್ಥಾನದ ಶ್ರೀ ವಿದ್ಯಾಭಿನವ ಸುಬ್ರಹ್ಮಣ್ಯ ಭಾರತೀ ಸ್ವಾಮೀಜಿ ಹೇಳಿದರು.
ದತ್ತಾತ್ರೇಯ ದೇವಸ್ಥಾನ ಟ್ರಸ್ಟ್ ಹಾಗೂ ಗುರುಭಕ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಗ್ರಾಮದ ಶ್ರೀ ಗುರುದತ್ತ ಮಂದಿರದಲ್ಲಿ ಸಂಪನ್ನಗೊಂಡ ಗುರುವಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪೌರಾಣಿಕ ಹಿನ್ನೆಲೆಗಳಲ್ಲಿಯೂ ಸಹ ಗುರು ಶ್ರೇಷ್ಠರು, ದಾಸ ಶ್ರೇಷ್ಠರು ಪರಮಾತ್ಮನ ಮೆಚ್ಚಿಸಲು ಸಾಧ್ಯವಾದ ಮಾರ್ಗವೆಂದರೆ ಅದು ಭಕ್ತಿವೊಂದೆ. ಭಕ್ತಿಯ ಮುಂದೆ ಹಣ, ಆಡಂಬರ ಯಾವುದೂ ನಡೆಯದು ಎಂದರು.
ಸಂಚಾಲಕ ಮಲ್ಲಾರಿರಾವ್ ಮಾತನಾಡಿ, ಎಲ್ಲದನ್ನೂ ಕರುಣಿಸುವ ಗುರುವಿಗೆ ನಾವು ದಾಸರಾದರೆ ಅವರಿಂದ ದೇವರ ಕೃಪೆ ನಮಗೆ ಉಂಟಾಗುತ್ತದೆ ಎಂದರು.
ಹೊಸದುರ್ಗ ಸದ್ಗುರು ಸೇವಾಶ್ರಮದ ಶ್ರೀಕಾಂತಾನಂದ ಸರಸ್ವತಿ ಸ್ವಾಮೀಜಿ, ಹುಲ್ಲೂರು ಆರ್.ಕೃಷ್ಣಾಜೋಯಿಸ್, ಅನಂತಪದ್ಮನಾಭ ರಾವ್, ವಿನಾಯಕ, ವಿಕ್ರಮ, ಡಿ.ಎಸ್.ಪ್ರದೀಪ್, ಹುಣಸೆಕಟ್ಟೆ ಸುರೇಶ್, ಸಿ.ರಾಮಸ್ವಾಮಿ, ಸಿ.ಶೇಷಗಿರಿ, ಶ್ರೀಪಾದ್‌ಭಟ್, ಅಂಬಿನಾಗಭೂಷಣ್, ಮುರಳೀಧರ್, ಶಿವಮೊಗ್ಗ ಗೋಪಿನಾಥ್, ಶ್ರೀನಿವಾಸ ಶ್ರೇಷ್ಠಿ, ಶಿವರಾಮ ಶ್ರೇಷ್ಠಿ, ಸಂಪತ್ ಕುಮಾರ್ ಶ್ರೇಷ್ಠಿ, ವೆಂಕಟಾದ್ರಿ ಶ್ರೇಷ್ಠಿ, ಮಂಜುನಾಥ್, ಹಾಲೇಶ್, ಭಾರತಮ್ಮ ಸೇರಿ ವಿಪ್ರ ಸಮಾಜ, ಆರ್ಯವೈಶ್ಯ ಸಮಾಜ, ಓಂಕಾರ ಯೋಗ ಕೇಂದ್ರ, ಪವಮಾನ ಪ್ರತಿಷ್ಠಾನ, ಭಜನಾಮಂಡಳಿ, ಆರ್‌ಎಸ್‌ಎಸ್ ಸದಸ್ಯರು ಇದ್ದರು.
ಬೆಂಗಳೂರಿನ ಸುಬ್ರಹ್ಮಣ್ಯ ಶಾಸ್ತ್ರಿ ಪೌರೋಹಿತ್ಯದಲ್ಲಿ ಎರಡು ದಿನ ಕಾಕಡಾರತಿ, ಭಜನೆ, ಗುರುಪಾದುಕೆಗಳೊಂದಿಗೆ ಪೂರ್ಣಕುಂಭ ಸ್ವಾಗತ, ಪುಣ್ಯವರ್ಚನೆ, ಕಳಸ ಸ್ಥಾಪನೆ, ರುದ್ರಾಭಿಷೇಕ, ಗಣಪತಿ, ನವಗ್ರಹ ಹೋಮ, ಗುರುಭಿಕ್ಷೆ, ಸತ್ಸಂಗ, ಮಹಾಮಂಗಳಾರತಿ , ಮಹಾಪ್ರಸಾದ ವಿನಿಯೋಗ ನಡೆದವು.