ಭರಮಸಾಗರ: ಇಲ್ಲಿನ ದೊಡ್ಡಕೆರೆ ಹೂಳೆತ್ತುವ ಕಾಮಗಾರಿ ಗುಣಮಟ್ಟದಿಂದ ಕೂಡಿರುವಂತೆ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಎಂ.ಚಂದ್ರಪ್ಪ ಗುತ್ತಿಗೆದಾರರಿಗೆ ಸೂಚಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮ ಪಂಚಾಯಿತಿ ಜಲಾಮೃತ ಯೋಜನೆ ವತಿಯಿಂದ ದೊಡ್ಡಕೆರೆಯಲ್ಲಿ ಇತ್ತೀಚೆಗೆ ಕೈಗೊಂಡಿದ್ದ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಆರ್ಥಿಕ ಸಂಕಷ್ಟ ಎದುರಾಗಿದ್ದರೂ ಆದ್ಯತೆ ಮೇರೆಗೆ ಕೆರೆ ಹೂಳೆತ್ತುವ ಕಾಮಗಾರಿಗೆ ಸರ್ಕಾರ ಅನುಮತಿ ನೀಡಿದೆ. ಇದು ಫಲಕಾರಿಯಾಗಲು ಗುಣಮಟ್ಟದ ಕಾಮಗಾರಿ ಆಗಬೇಕು. ಕೆರೆ ಒಡಲಲ್ಲಿರುವ ಜಾಲಿ ಗಿಡಗಳನ್ನು ಬುಡ ಸಮೇತ ಕಿತ್ತೊಗೆಯಬೇಕು. ಬರಿ ಟೊಂಗೆ ಕತ್ತರಿಸಿದರೆ ನಾನು ಸಹಿಸುವುದಿಲ್ಲ ಎಂದು ಇಂಜಿನೀಯರ್ ಮತ್ತು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.
ಜಿಪಂ ಸದಸ್ಯ ಡಿ.ವಿ.ಶರಣಪ್ಪ, ತಾಪಂ ಸದಸ್ಯರಾದ ಎನ್.ಕಲ್ಲೇಶ್, ನಾಗೇಂದ್ರಪ್ಪ, ಡಿ.ಎಸ್.ಪ್ರದೀಪ್, ಸಾಮಿಲ್ ಶಿವಣ್ಣ, ಎಮ್ಮನಘಟ್ಟ ಶಿವಣ್ಣ, ನರಗನಹಳ್ಳಿ ರಾಜಣ್ಣ, ಗ್ರಾಪಂ ಅಧ್ಯಕ್ಷ ಶ್ರೀನಿವಾಸ್, ಸದಸ್ಯ ಸಿ.ಟಿ. ುಹಾಂತೇಶ್, ಮುರುಗೇಶ್, ಪಿಡಿಒ ಶ್ರೀದೇವಿ, ಗುತ್ತಿಗೆದಾರ ಎಚ್.ಎನ್.ಕಲ್ಲಪ್ಪ, ಕೆರೆ ನೀರು ಬಳಕೆದಾರರು, ಕೆರೆ ನೀರು ಹೋರಾಟ ಸಮಿತಿ ಕಾರ್ಯಕರ್ತರು ಉಪಸ್ಥಿತರಿದ್ದರು.