ಜಿಲ್ಲೆ

ಪತ್ತಿನ ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ

Chitradurga

ಭರಮಸಾಗರ: ಹೋಬಳಿಯ ಕೊಳಹಾಳು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷ, ಉಪಾಧ್ಯಕ್ಷರಾಗಿ ಕ್ರಮವಾಗಿ ಎಚ್.ಆರ್. ಯೋಗೀಶ್, ಕೆ.ಆರ್. ರುದ್ರೇಶ್ ಅವಿರೋಧ ಆಯ್ಕೆಯಾಗಿದ್ದಾರೆ.

ಬುಧವಾರ ಚುನಾವಣೆ ನಿಗದಿಯಾಗಿತ್ತು. ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಘೋಷಿಸಲಾಯಿತು. ಮುಖಂಡ ವೀರಭದ್ರಪ್ಪ, ಕೆ.ಸಿ. ಮುನಿಸ್ವಾಮಿ, ಕೆ.ಎನ್. ನಾಗರಾಜ್, ಕೆ.ಎನ್. ಬಸವರಾಜ್, ವಸಂತಕುಮಾರ್, ಕೆ.ಜೆ. ಚಂದ್ರು, ಎಚ್.ಸಿ. ಪರಮೇಶ್ವರ ಇದ್ದರು.