ಭರಮಸಾಗರ: ಹೋಬಳಿಯ ಕೋಗುಂಡೆ ಗ್ರಾಮದಲ್ಲಿ ಭಾನುವಾರ ರಾತ್ರಿ ಬಸವೇಶ್ವರ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ಸ್ವಾಮಿಯ ಉತ್ಸವ ಮೂರ್ತಿಯನ್ನು ಮೂಲ ದೇಗುಲದ ಬಳಿ ರಜತ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ತೆರೆದ ವಾಹನದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಜಗಳೂರು ತಾಲೂಕಿನ ಗೊಪ್ಪೇನಹಳ್ಳಿಯ ಕಲಾವಿದರು ವೀರಗಾಸೆ ನೃತ್ಯ ಪ್ರದರ್ಶಿಸಿದರು.
ಹರಕೆ, ಜವಳ, ಅಡ್ಡಪಲ್ಲಕ್ಕಿ ಉತ್ಸವ, ಸೋಮವಾರ ಓಕುಳಿ, ಗಂಗಾಪೂಜೆ, ಕಂಕಣ ವಿಸರ್ಜನೆ ಕಾರ್ಯಕ್ರಮದೊಂದಿಗೆ ಜಾತ್ರಾ ಮಹೋತ್ಸವ ತೆರೆ ಕಂಡಿತು.
ದೇಗುಲದ ಸಂಚಾಲಕ ಎಚ್.ಎಂ.ಮಂಜುನಾಥ್, ಮುಖಂಡರಾದ ಕೆ.ಜಿ.ವಿರೂಪಾಕ್ಷಪ್ಪ, ಎಂ.ಜಿ.ಲೋಕೇಶ್ವರಪ್ಪ, ಅರ್ಚಕ ಮುರುಡಪ್ಪ, ಗ್ರಾಪಂ ಅಧ್ಯಕ್ಷೆ ನೇತ್ರಾವತಿ, ಉಪಾಧ್ಯಕ್ಷ ಎಚ್.ಎಸ್.ನಾಗರಾಜಪ್ಪ, ಎಚ್.ಓಬಪ್ಪ, ಕೆ.ಆರ್.ಸುರೇಶ್, ಇಂದ್ರಮ್ಮ, ಕೆ.ಜಗದೀಶ್, ಶೈಲಜಾ, ಬಿ.ಪಿ.ಚಂದ್ರಶೇಖರ್, ಪಿ.ಎಂ.ಸಿದ್ದಪ್ಪ, ಟಿ.ಎಂ.ಬಸವರಾಜ್, ಎಚ್.ಎಂ.ಗುರುಸ್ವಾಮಿ ಇದ್ದರು.