ಭರಮಸಾಗರ: ಹೋಬಳಿಯ ಸಿದ್ದರನಾಡು ಇಸಾಮುದ್ರ ಗ್ರಾಮ ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರೋತ್ಸವಕ್ಕೆ ಸೋಮವಾರ ಮದಲಿಂಗ ಶಾಸ್ತ್ರದೊಂದಿಗೆ ಚಾಲನೆ ದೊರೆಯಿತು.
ಸಂಪ್ರದಾಯದಂತೆ ಶ್ರೀಸ್ವಾಮಿಯನ್ನು ಪಟ್ಟಕ್ಕೆ ಕೂರಿಸಿ ಶಾಸ್ತ್ರೋಕ್ತವಾಗಿ ಮದಲಿಂಗ ಶಾಸ್ತ್ರ ನೆರವೇರಿಸಲಾಯಿತು. ಫೆ.25ರ ರಾತ್ರಿ ಕುದುರೆ ಸೇವೆ, 26ರ ರಾತ್ರಿ ಆನೆ ಉಚ್ಚಾಯ, 27ರ ರಾತ್ರಿ ಬಸವನ ಉಚ್ಚಾಯ ನಡೆಯಲಿವೆ. 28ರ ಸಂಜೆ ಗೋಧೂಳಿ ವೇಳೆಯಲ್ಲಿ ಭಜಂತ್ರಿ, ಕೋಲುಮೇಳ, ಭಜನೆ, ಮಂಗಳವಾದ್ಯದೊಂದಿಗೆ ಸಿದ್ದೇಶ್ವರಸ್ವಾಮಿ ರಥೋತ್ಸವ ಜರುಗಲಿದೆ. ಫೆ.29ಕ್ಕೆ ದೇವಸ್ಥಾನ ಆವರಣದಲ್ಲಿ ಪಾನಕದ ಗಾಡಿ, ಮಕ್ಕಳ ಜವಳ, ಬಾಯಿಬೀಗ ಕಾರ್ಯಗಳು ಜರುಗಲಿವೆ.
ಮಾ.1 ರಂದು 8ನೇ ವರ್ಷದ ಸಾಮೂಹಿಕ ವಿವಾಹ ಮಹೋತ್ಸವ, ಓಕಳಿ ಸೇವೆ, ಗಂಗಾಪೂಜೆಯೊಂದಿಗೆ ದೇವರನ್ನು ಗುಡಿದುಂಬಿಸಿ ಜಾತ್ರೆಗೆ ತೆರೆ ಎಳೆಯಲಾಗುತ್ತದೆ ಎಂದು ದೇವಸ್ಥಾನ ಸೇವಾ ಸಮಿತಿ ಧರ್ಮದರ್ಶಿ ಡಿ.ಎಸ್. ರುದ್ರಮುನಿ ತಿಳಿಸಿದ್ದಾರೆ.