ಜಿಲ್ಲೆ

ಆಟೋಗಳ ನಿಯಂತ್ರಣಕ್ಕೆ ಸೂಚನೆ

Chitradurga

ಭರಮಸಾಗರ: ಇಲ್ಲಿನ ವಿನಾಯಕ ಚಿತ್ರಮಂದಿರದಿಂದ ಬಿಳಿಚೋಡು, ಬಿದರಿಕೆರೆಗೆ ತೆರಳುವ ಮಾರ್ಗದಲ್ಲಿ ವಾಹನ ದಟ್ಟಣೆ ಹೆಚ್ಚಿದ್ದು, ಪೊಲೀಸ್ ಸಿಬ್ಬಂದಿ ನಿಯೋಜಿಸುವಂತೆ ಶಾಸಕ ಎಂ.ಚಂದ್ರಪ್ಪ ಪಿಎಸ್‌ಐ ರಾಜುಗೆ ಸೂಚಿಸಿದರು.

ಇತ್ತೀಚೆಗೆ ಗ್ರಾಮಕ್ಕೆ ಭೇಟಿ ನೀಡಿದ ಶಾಸಕರು ಸಂಚಾರ ಸಮಸ್ಯೆ ಕುರಿತು ಪರಿಶೀಲಿಸಿದರು. ವಾಹನ ಸಂಚಾರಕ್ಕೆ ಅನುಕೂಲವಾಗುವ ದೃಷ್ಟಿಯಿಂದ ರಸ್ತೆ ವಿಸ್ತರಣೆ ಮಾಡಲಾಗಿತ್ತು. ಆದರೆ, ಈಗ ರಸ್ತೆ ಬದಿ ಗೂಡಂಗಡಿ, ಆಟೋಗಳ ನಿಲುಗಡೆಯಿಂದ ಸಮಸ್ಯೆಯಾಗುತ್ತಿದೆ. ಆದ್ದರಿಂದ ಪೊಲೀಸ್ ಸಿಬ್ಬಂದಿ ನೇಮಿಸಬೇಕು ಎಂದರು ಸೂಚಿಸಿದರು.

ಗ್ರಾಮದಲ್ಲಿ ವಿಶಾಲವಾದ ಸಂತೆ ಮೈದಾನವಿದ್ದರೂ ಸಹ ಮುಖ್ಯ ರಸ್ತೆಯಲ್ಲಿಯೇ ತರಕಾರಿ, ಬಟ್ಟೆ, ಇತರೆ ವ್ಯಾಪಾರ ವಹಿವಾಟು ನಡೆಸಲಾಗುತ್ತಿದೆ. ಕೈಗಾಡಿ, ಸರಕು ಆಟೋಗಳು ಎಲ್ಲೆಂದರಲ್ಲಿ ನಿಲ್ಲುತ್ತಿವೆ. ಇದರಿಂದ ಸಂಚಾರ ದ ತೊಂದರೆ ಉಂಟಾಗಿದೆ. ವಾರದೊಳಗೆ ಸಮಸ್ಯೆ ಬಗೆಹರಿಸಬೇಕು ಎಂದು ಹೇಳಿದರು.