ಜಿಲ್ಲೆ

ಭಂಡಾರೋತ್ಸವ ಮೆರವಣಿಗೆ

ಮರಿದೇವ ಹೂಗಾರ

ಹುಬ್ಬಳ್ಳಿ: ಇಲ್ಲಿಯ ಅರವಿಂದ ನಗರದಲ್ಲಿರುವ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದಲ್ಲಿ ಭಂಡಾರೋತ್ಸವ ಕಾರ್ಯಕ್ರಮವನ್ನು ಸೋಮವಾರ ಏರ್ಪಡಿಸಲಾಗಿತ್ತು.
ನಗರದ ಮುಖ್ಯ ರಸ್ತೆಗಳಲ್ಲಿ ಭಂಡಾರೋತ್ಸವದ ಭವ್ಯ ಮೆರವಣಿಗೆಯು ವಿಜೃಂಭಣೆಯಿಂದ ಜರುಗಿತು. ಡೊಳ್ಳು, ಮಹಿಳಾ ವೀರಗಾಸೆ ಕಲಾ ತಂಡಗಳೊಂದಿಗೆ ಮೆರವಣಿಗೆ ದೇವಸ್ಥಾನದಿಂದ ಹೊರಟು ದಿಡ್ಡಿ ಓಣಿಯ ಗ್ರಾಮದೇವತೆ ಶ್ರೀ ದ್ಯಾಮವ್ವ ದೇವಿ ಹಾಗೂ ದುರ್ಗಾದೇವಿ ದೇವಸ್ಥಾನಕ್ಕೆ ತೆರಳಿತು. ನಂತರ ಉಭಯ ದೇವತೆಯರಿಗೆ ಉಡಿ ತುಂಬಿ ಪೂಜಾ ಕೈಂಕರ್ಯ ನೆರವೇರಿಸಿ, ಮರಳೀ ದೇವಸ್ಥಾನ ತಲುಪಿತು. ದೇವಿಗೆ ಮಂಗಳಾರತಿ ನಂತರ ಪ್ರಸಾದ ವಿತರಿಸಲಾಯಿತು.
ಮಾತೋಶ್ರೀ ಹುಲಿಗೆಮ್ಮ ಪೋಸಾ ಅಮ್ಮನವರು ಸಾನ್ನಿಧ್ಯ ವಹಿಸಿದ್ದರು. ಶಾಸಕ ಮಹೇಶ ಟೆಂಗಿನಕಾಯಿ ಭಂಡಾರೋತ್ಸವದ ಮೆರವಣಿಗೆಗೆ ಚಾಲನೆ ನೀಡಿದರು.
ಪ್ರಮುಖರಾದ ತೋಟಪ್ಪ ನಿಡಗುಂದಿ, ಮಹೇಶ ದಾಬಡೆ, ಹೇಮಂತ ಕರ್ಜಗಿ, ವಿರೂಪಾಕ್ಷಿ ಚಲವಾದಿ, ವಾಗೇಶಗೌಡ ಪಾಟೀಲ, ಪ್ರಕಾಶ ಅರಗಂಜಿ, ಗುರು ಬನ್ನಿಕೊಪ್ಪ, ಸಂಜು ಬುಗಡಿ, ಕಿರಣ ಮೇತ್ರಾಣಿ, ಸಿದ್ದರಾಮ ಸುಳ್ಳದ, ಜೀವಣ್ಣ ವಡ್ಡರ, ಲಕ್ಷ್ಮಣ ವಡ್ಡರ, ಪರಶುರಾಮ ಸುಳ್ಳದ, ಕಾಶಿ ಕಟ್ಟಿ, ವೆಂಕಟೇಶ ರತನ, ದೇವಸ್ಥಾನದ ಪ್ರಧಾನ ಅರ್ಚಕ ರವಿಕುಮಾರ ಮಡ್ಡಿ, ಗಂಗಮ್ಮ ಗಾಯಕವಾಡ, ಆಶಾ ರಜಪೂತ, ಪದ್ಮಾ ದಿವಟೆ, ಸವಿತಾ ಮಾಸಣಗಿ, ಪುಷ್ಪಾ ಏಕಬೋಟೆ, ಶೋಭಾ ತಾಂಬೆ, ರತ್ನಾ ಹೆಬ್ಬಳ್ಳಿ ಇತರರು ಇದ್ದರು.
ಉಡಿ ತುಂಬುವುದು ಇಂದು: ಜ. 30ರಂದು ಬೆಳಗ್ಗೆ 10 ಗಂಟೆಗೆ ಶ್ರೀ ದೇವಿಯವರ ಮಹಾನೈವೇದ್ಯಕ್ಕೆ ಸುಹಾಸಿನಿಯರನ್ನಿರಿಸಿ, ಉಡಿ ತುಂಬಿ ಅವರಿಂದ ಶ್ರೀ ದೇವಿಯವರಿಗೆ ಮಹಾಮಂಗಳಾರತಿ ನೆರವೇರಿಸಲಾಗುವುದು. ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ಜರಗಲಿದೆ.