ಜಿಲ್ಲೆ

ಭಂಡಾರ ಪೂಜಾ ಕಾರ್ಯಕ್ರಮ ಶುಕ್ರವಾರ

ರುದ್ರಪ್ಪ ವಾಲಿ

ಸಿಂಧನೂರು: ನಗರದ ಆದರ್ಶ ಕಾಲನಿಯಲ್ಲಿರುವ ಶ್ರೀ ಸೋಮವಂಶ ಸಹಸ್ರಾರ್ಜುನ ಕ ್ಷತ್ರೀಯ ಸಮಾಜದ ಶ್ರೀಅಂಬಾಭವಾನಿ ದೇವಿಯ ಆಷಾಢ ಮಾಸದ ಭಂಡಾರ ಪೂಜಾ ಕಾರ್ಯಕ್ರಮ ಜೂ.27 ರಂದು ಹಮ್ಮಿಕೊಳ್ಳಲಾಗಿದೆ ಎಂದು ಎಸ್‌ಎಸ್‌ಕೆ ಸಮಾಜದ ಅಧ್ಯಕ್ಷ ಆನಂದ ಸಾ. ರಾಯಬಾಗಿ ತಿಳಿಸಿದ್ದಾರೆ.

ದೇವಿಗೆ ವಸ್ತ್ರಾಲಂಕಾರ, ಅಭಿಷೇಕ, ಪಂಚಾಮೃತ, ವಿವಿಧ ರೀತಿಯ ಪುಷ್ಪಾಲಂಕಾರ, ಭಂಡಾರ ಅಲಂಕಾರ, ನೈವೇದ್ಯ, ವಿಶೇಷ ಪೂಜೆ ನಡೆಯಲಿವೆ. ಮಧ್ಯಾಹ್ನ ಮಹಾಮಂಗಳಾರತಿ, ನಂತರ ಭಕ್ತರಿಗೆ ತೀರ್ಥ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿದೆ. ಎಸ್‌ಎಸ್‌ಕೆ ಪಂಚಟ್ರಸ್ಟ್ ಕಮಿಟಿ, ಜಯದುರ್ಗಾ ಮಹಿಳಾ ಮಂಡಳಿ, ಎಸ್‌ಎಸ್‌ಕೆ ತರುಣ ಸಂಘದಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.