ರಾಯಚೂರಿನ ನಿಜಲಿಂಗಪ್ಪ ಕಾಲನಿಯಲ್ಲಿನ ಗಣೇಶ ದೇವಸ್ಥಾನದಲ್ಲಿನ ನಾಗ ದೇವರ ಮೂರ್ತಿಗೆ ನಾಗರ ಪಂಚಮಿ ನಿಮಿತ್ತ ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿದರು. 
ಜಿಲ್ಲೆ

ಭಕ್ತಿ, ಶ್ರದ್ಧೆಯಿಂದ ಪಂಚಮಿ ಆಚರಣೆ

Kopala - Desk - Eraveni

ರಾಯಚೂರು: ನಾಗರ ಪಂಚಮಿ ನಿಮಿತ್ತ ಜಿಲ್ಲೆಯಾದ್ಯಂತ ಮಹಿಳೆಯರು ನಾಗ ದೇವರ ಮೂರ್ತಿಗಳಿಗೆ ಸೋಮವಾರ ಹಾಲೇರೆದು ನೈವೈದ್ಯ ಸಮರ್ಪಿಸುವ ಮೂಲಕ ಹಬ್ಬವನ್ನು ಭಕ್ತಿ, ಶ್ರದ್ಧೆಯಿಂದ ಆಚರಿಸಿದರು.

ನಗರದ ನಂದೀಶ್ವರ ದೇವಸ್ಥಾನ, ರಾಮಲಿಂಗೇಶ್ವರ ದೇವಸ್ಥಾನ, ಚಂದ್ರಮೌಳ್ವೇಶ್ವರ ದೇವಸ್ಥಾನ, ವೀರಭದ್ರೇಶ್ವರ ದೇವಸ್ಥಾನ, ಗಣೇಶ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನದಲ್ಲಿನ ನಾಗ ದೇವರ ಮೂರ್ತಿಗಳಿಗೆ ಅಭಿಷೇಕ, ವಿಶೇಷ ಪೂಜೆ ನೆರವೇರಿಸಲಾಯಿತು.

ಮಹಿಳೆಯರು ಮನೆಯಲ್ಲಿ ಸಿಹಿ ಖಾದ್ಯಗಳನ್ನು ತಯಾರಿಸಿ ನಾಗ ದೇವರಿಗೆ ಹಾಲೇರೆದು ನೈವೈದ್ಯ ಮಾಡುವ ಮೂಲಕ ನಾಗರ ಪಂಚಮಿಯನ್ನು ಸಡಗರ, ಸಂಭ್ರಮದಿಂದ ಆಚರಿಸಿದರು.