ಜಿಲ್ಲೆ

ಭಕ್ತಿ ಸಂಗೀತ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಕ್ಲಬ್ ರಸ್ತೆ ಮಹಾರಾಷ್ಟ್ರ ಮಂಡಳದಲ್ಲಿ ನಗರದ ಖ್ಯಾತ ಗಾಯಕರಾದ ಪಂ. ಬಾಲಚಂದ್ರ ನಾಕೋಡ ಹಾಗೂ ಸ್ಥಾಯಿ ನಾಕೋಡ ಅವರ ಭಕ್ತಿ ಸಂಗೀತ ಕಾರ್ಯಕ್ರಮ ಸೆ. 9ರಂದು ಸಂಜೆ 6.30ಕ್ಕೆ ಏರ್ಪಡಿಸಲಾಗಿದೆ.

ಆದರ್ಶ ಬಗಾಡೆ ಹಾಮೋರ್ನಿಯಂ, ರಾಘವೇಂದ್ರ ನಾಕೋಡ್ ತಬಲಾ, ಪ್ರಕಾಶ ಕುಲಕರ್ಣಿ ತಾಳವಾದ್ಯ, ಮಧು ನಾಕೋಡ್ ಮತ್ತು ಅಶೋಕ ಮಳಗಲಿ ತಂಬೂರಿ ಸಾಥ್ ನೀಡುವರು.
ಸಂಗೀತ ಪ್ರಿಯರು ಪಾಲ್ಗೊಳ್ಳಬೇಕೆಂದು ಮಂಡಳ ಅಧ್ಯಕ್ಷ ಶರದ್ ಸೇವಡೆ ಕೋರಿದ್ದಾರೆ.