ಇಳಕಲ್ಲ : ಯಾವುದೇ ಕುಲ-ಗೋತ್ರಗಳಿಗೆ ಗಂಟು ಬೀಳದ ಕನಕದಾಸರು ಈ ನಾಡು ಕಂಡ ಭಕ್ತ ಶ್ರೇಷ್ಠರು ಎಂದು ಕರ್ನಾಟಕ ವೀರಶೈವ ಲಿಂಗಾಯತ ಅಭಿವದ್ಧಿ ನಿಗಮದ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ನಗರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸೋಮವಾರ ನಡೆದ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ ಸಾಕಾ, ವಿಜಯಮಹಾಂತೇಶ ಗದ್ದನಕೇರಿ, ಸಮಾಜ ಮುಖಂಡರಾದ ಸಂಗಣ್ಣ ಓಲೇಕಾರ, ನೀಲಪ್ಪ ತಪೇಲಿ, ಶರಣು ಇದ್ದಲಗಿ, ಮುರಗೇಶ ಸಂಗಮ್, ಸಂಗು ತೊಂಡಿಹಾಳ ಮತ್ತಿತರರು ಇದ್ದರು.
ನಗರಸಭೆ ಕಚೇರಿಯಲ್ಲಿ : ನಗರಸಭೆ ಕಾರ್ಯಾಲಯದ ಎಸ್.ಆರ್.ಕಂಠಿ ಸಭಾಂಗಣದಲ್ಲಿ ಭಕ್ತ ಕನಕದಾಸರ ಜಯಂತಿಯನ್ನು ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.
ಭಾವಚಿತ್ರಕ್ಕೆ ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ್ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ನಗರಸಭೆ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಇದ್ದರು.
ತಹಸೀಲ್ದಾರ್ ಕಚೇರಿ: ನಗರದ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಕನಕದಾಸರ ಜಯಂತಿಯನ್ನು ಸಮಾಜ ಬಾಂಧವರು ಮತ್ತು ತಹಸೀಲ್ದಾರ್ ಸತೀಶ ಕೂಡಲಗಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಿದರು. ಸಮಾಜದ ಹಿರಿಯರಾದ ಸಂಗಣ್ಣ ಓಲೇಕಾರ, ಸಿದ್ದಣ್ಣ ಘಂಟಿ, ಶರಣಪ್ಪ ಇದ್ದಲಗಿ, ಗ್ರೇಡ್ 2 ತಹಸೀಲ್ದಾರ್ ಈಶ್ವರ ಗಡ್ಡಿ, ಪ್ರಕಾಶ ವಜ್ಜಲ, ನವೀನ ಪಾಟೀಲ ಮತ್ತಿತರರು ಭಾಗವಹಿಸಿದ್ದರು.
ಎಪಿಎಂಸಿ ಯಾರ್ಡ್: ಎಪಿಎಂಸಿಯ ಸಜ್ಜಲಶ್ರೀ ಅಂಗಡಿಯಲ್ಲಿ ದಾಸಶ್ರೇಷ್ಠ ಭಕ್ತ ಕನಕದಾಸರ ಜಯಂತಿ ಆಚರಿಸಲಾಯಿತು. ಕನಕದಾಸರ ಭಾವಚಿತ್ರಕ್ಕೆ ಬಿಜೆಪಿ ಗ್ರಾಮೀಣ ಮಂಡಳ ಅಧ್ಯಕ್ಷ ಮಹಾಂತಗೌಡ ಪಾಟೀಲ ತೊಂಡಿಹಾಳ ಮತ್ತು ಸಮಾಜದ ಮುಖಂಡರು ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿದರು.
ನಿಂಗಪ್ಪ ಗುರಿಕಾರ್, ಬಸವಂತಪ್ಪ ಕಳ್ಳಿಗುಡ್ಡ, ನಾಗರಾಜ ಕಳ್ಳಿಗುಡ್ಡ, ದೊಡ್ಡಬಸಪ್ಪ ಕುರಿ, ಸಂಗಣ್ಣ ಓಲೆಕಾರ, ಜಕ್ಕಪ್ಪ ಕಳ್ಳಿಗುಡ್ಡ, ಬಸವರಾಜ್ ಬಡವಾಡಗಿ, ಮಹಾಂತೇಶ ಪೂಜಾರಿ, ಪಂಪನಗೌಡ ಪಾಟೀಲ, ನಾಗಪ್ಪ ಗುರಿಕಾರ, ರಾಮನಗೌಡ ಸಂದಿಮನಿ, ಶಂಕರಗೌಡ ಪಾಟೀಲ, ಹನುಮಂತ ಕುರಿ, ಸಂಜೀವ ಕುರಿ ಇದ್ದರು.