ಹಿರೇಕೆರೂರ: ಅಧಿಕ ಮಾಸದ ಕೊನೆಯ ಶನಿವಾರ ತಾಲೂಕಿನ ಸಾತೇನಹಳ್ಳಿಯ ಶಾಂತೇಶ(ಮಾರುತಿ) ದೇವರ ದರ್ಶನಕ್ಕೆ ಅಪಾರ ಸಂಖ್ಯೆ ಭಕ್ತರು ಸಾಗರೋಪಾದಿಯಲ್ಲಿ ಹರಿದು ಬಂದ ಭಕ್ತ ಸಮೂಹ.
ತಾಲೂಕಿನ ಸಾತೇನಹಳ್ಳಿ ಗ್ರಾಮದ ಶಾಂತೇಶ (ಮಾರುತಿ), ಬ್ಯಾಡಗಿ ತಾಲೂಕಿನ ಕದರಮಂಡಲಗಿ ಆಂಜನೇಯ (ಕಾಂತೇಶ) ಶಿಕಾರಿಪುರದ ಹುಚ್ಚರಾಯಸ್ವಾಮಿ (ಬ್ರಾಂತೇಶ) ಈ ಮೂರು ದೇವರ ದರ್ಶನವನ್ನು ಅಧಿಕ ಮಾಸದ ಶನಿವಾರದಂದು ಒಂದೇ ದಿನ ಪಡೆದರೆ ಕಾಶಿ ಯಾತ್ರೆ ಮಾಡಿದ ಫಲ ಪ್ರಾಪ್ತಿಯಾಗುತ್ತದೆ ಎಂಬ ಪುರಾಣೋಕ್ತಿಯಂತೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಹಿರೇಕೆರೂರು ತಾಲೂಕಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾದ ಸಾತೇನಹಳ್ಳಿ ಗ್ರಾಮದ ಶಾಂತೇಶ(ಮಾರುತಿ) ದೇವರ ದರ್ಶನಕ್ಕೆ ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದರು. ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸರು ಸೂಕ್ತ ವ್ಯವಸ್ಥೆ ಕಲ್ಪಿಸಿದ್ದರು.
ಬಸವರಾಜ ಮಾನಿಬಣಕಾರ, ಸುಭಾಸ್ ಮಾನೇರ, ಸುರೇಶ ಕರಡೇರ, ಮಹೇಶ ಮುದಿಗೌಡ್ರ, ಅಶೋಕ ಯಲಿವಾಳ, ಸೋಮು ಕರಡೇರ, ಲಕ್ಷ್ಮಣ ಬಡಿಗೇರ, ಚಂದ್ರಶೇಖರ ಅತ್ತಿಕಟ್ಟಿ, ಸುರೇಶ ಮಾನೇರ ಹಾಗೂ ದೇವಸ್ಥಾನ ಕಮೀಟಿಯ ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.