ಸುಳ್ಯ: ತಾಲೂಕು ಭಜನಾ ಪರಿಷತ್ ವತಿಯಿಂದ ಭಜಕರ ಸಂಘಟನೆಗಾಗಿ ವರ್ಷಂಪ್ರತಿ ಹಮ್ಮಿಕೊಳ್ಳುವ ಭಜನೋತ್ಸವ ನ.17ರಂದು ಅರಂತೋಡು ಎನ್‌ಎಂಪಿಯು ಕಾಲೇಜು ವಠಾರದಲ್ಲಿ ನಡೆಯಲಿದ್ದು, ಪೂರ್ವಭಾವಿ ಸಭೆಯು ಅರಂತೋಡಿನಲ್ಲಿ ಶನಿವಾರ ನಡೆಯಿತು.
ಯೋಜನಾಧಿಕಾರಿ ಮಾಧವ ಗೌಡ ಕಾರ್ಯಕ್ರಮದ ರೂಪುರೇಷೆ ತಿಳಿಸಿದರು. ಭಜನೋತ್ಸವ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಹರೀಶ್ ಕಂಜಿಪಿಲಿ ಸರ್ವಾನುಮತದಿಂದ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಕೆ.ಆರ್.ಪದ್ಮನಾಭ, ಉಪಾಧ್ಯಕ್ಷರಾಗಿ ರಾಮಚಂದ್ರ ಕಲ್ಲುಗದ್ದೆ, ಚಂದ್ರಕಲಾ ಕುತ್ತಮೊಟ್ಟೆ, ಕಾರ್ಯದರ್ಶಿ ಮೇಲ್ವಿಚಾರಕ ಗಂಗಾಧರ, ಜತೆಕಾರ್ಯದರ್ಶಿ ಭಾರತಿ ಪುರುಷೋತ್ತಮ, ಕೋಶಾಧಿಕಾರಿ ಭವಾನಿಶಂಕರ ಅಡ್ತಲೆ, ಗೌರವ ಸಲಹೆಗಾರರಾಗಿ ಕೇಶವ ಅಡ್ತಲೆ, ಕೆ.ಆರ್.ಗಂಗಾಧರ, ಪಿ.ಬಿ.ದಿವಾಕರ ರೈ, ಲೋಕನಾಥ್ ಅಮೆಚೂರ್, ಸಂತೋಷ್ ಕುತ್ತಮೊಟ್ಟೆ, ಚಂದ್ರಶೇಖರ ನೆಡ್ಚಿಲು, ಎ.ಕೆ.ಜತ್ತಪ್ಪ ಮಾಸ್ತರ್, ಪೂವಯ್ಯ ಚೂರ್ನಾಡು, ಸರಸ್ವತಿ ಕಕ್ಕಾಡು, ಮಾಲತಿ ಭೋಜಪ್ಪ ಅವರನ್ನು ಆಯ್ಕೆ ಮಾಡಲಾಯಿತು.
ಪಂಚಾಯಿತಿ ಅಧ್ಯಕ್ಷ ಕೇಶವ ಅಡ್ತಲೆ, ಲೋಕನಾಥ್ ಅಮೆಚೂರ್, ಗೌರವಾಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ, ಸಮನ್ವಯಾಧಿಕಾರಿ ಸಂತೋಷ್, ಕೋಶಾಧಿಕಾರಿ ಮಹೇಶ್ ಮೇರ್ಕಜೆ, ತೀರ್ಥರಾಮ ಅಡ್ಕಬಳೆ, ಕೆ.ಆರ್.ಗಂಗಾಧರ, ಭವಾನಿಶಂಕರ ಅಡ್ತಲೆ, ಚಂದ್ರಶೇಖರ ಬೆಳ್ಳಿಪ್ಪಾಡಿ, ಕಾರ್ಯದರ್ಶಿ ಸತೀಶ್ ಟಿ.ಎನ್., ಪರಿಷತ್ ನಿರ್ದೇಶಕ ಸೋಮಶೇಖರ ಪೈಕ ಉಪಸ್ಥಿತರಿದ್ದರು. ಮೇಲ್ವಿಚಾರಕ ಗಂಗಾಧರ ಕಾರ್ಯಕ್ರಮ ನಿರೂಪಿಸಿದರು. ಸೇವಾ ಪ್ರತಿನಿಧಿ ತಾರಾ ಚಿದಾನಂದ ವಂದಿಸಿದರು.