ಜಿಲ್ಲೆ

ಹಿಂದು ಧರ್ಮ ರಕ್ಷಣೆಗಾಗಿ ಒಗ್ಗಟ್ಟು : ಸಂಪತ್ ಸುವರ್ಣ ಆಶಯ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಹಿಂದು ಧರ್ಮದ ರಕ್ಷಣೆ, ಸಂಸ್ಕೃತಿ ಕಾಪಾಡಲು ಧಾರ್ಮಿಕ ಕಾರ್ಯಕ್ರಮಗಳು ನಡೆಸುದರೊಂದಿಗೆ ಹಿಂದು ಸಮಾಜ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಸುವರ್ಣ ಪ್ರತಿಷ್ಠಾನ ಬೆಳ್ತಂಗಡಿ ಅಧ್ಯಕ್ಷ ಸಂಪತ್ ಸುವರ್ಣ ಹೇಳಿದರು.

ಶ್ರೀರಾಮ ಸೇವಾ ಸಮಿತಿ ಮದ್ದಡ್ಕ, ವಿಶ್ವ ಹಿಂದು ಪರಿಷತ್ ಬಜರಂಗದಳ ಮದ್ದಡ್ಕ ಆಶ್ರಯದಲ್ಲಿ ರಾಮನವಮಿ ಉತ್ಸವ ಪ್ರಯುಕ್ತ ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೆ ಆಯೋಜಿಸಲಾಗಿದ್ದ ಭಜನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶ್ರೀ ಕ್ಷೇತ್ರ ಓಡಿಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪ್ರಧಾನ ಅರ್ಚಕ ಎಂ.ರಘುರಾಮ್ ಭಟ್ ಮಠ ಶ್ರೀರಾಮ ಭಜನಾ ಮಂದಿರದಲ್ಲಿ ಗಣಪತಿ ಹೋಮ, ವೈದಿಕ ವಿಧಿವಿಧಾನಗಳನ್ನು ನೆರವೇರಿಸಿ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀರಾಮ ಸೇವಾ ಸಮಿತಿ ಅಧ್ಯಕ್ಷ ಮನೋಹರ ಕೇದಳಿಕೆ ಅಧ್ಯಕ್ಷತೆ ವಹಿಸಿದ್ದರು.

ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಮಾಜಿ ಶಾಸಕ ಕೆ.ಪ್ರಭಾಕರ ಬಂಗೇರ, ಶಶಿಧರ ಶೆಟ್ಟಿ ಬರೋಡ, ವಿಹಿಂಪ ದ.ಕ. ಸಹ ಸಂಚಾಲಕ ದಿನೇಶ್ ಚಾರ್ಮಾಡಿ, ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಗುರುವಾಯನಕೆರೆ ಅಧ್ಯಕ್ಷ ಅಜಿತ್ ಕುಮಾರ್ ಶೆಟ್ಟಿ ಕೋಯಾರು, ಕುವೆಟ್ಟು ಗ್ರಾಪಂ ಅಧ್ಯಕ್ಷೆ ಭಾರತಿ ಎಸ್.ಶೆಟ್ಟಿ, ರತ್ನಾಕರ ಭಟ್ ವೇದಾಶ್ರಯ ಸರಪಾಡಿ ಮದ್ದಡ್ಕ, ಹೊನ್ನಪ್ಪ ಕುಲಾಲ್, ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮೈರಲ್ಕೆ ಅಧ್ಯಕ್ಷ ಗೋಪಾಲ ಶೆಟ್ಟಿ ಕೋಯಾರು, ವ್ರೀ ಕ್ಷೇತ್ರ ಓಡಿಲು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಿನೇಶ್ ಮೂಲ್ಯ ಕೊಂಡೆಮಾರ್, ಶ್ರೀಕೃಷ್ಣ ಭಜನಾ ಮಂದಿರ ಪಣಕಜೆ ಅಧ್ಯಕ್ಷ ಶ್ರೀಕಾಂತ್ ಮುಂಡಾಡಿ, ಕುವೆಟ್ಟು ಗ್ರಾಪಂ ಉಪಾಧ್ಯಕ್ಷ ಗಣೇಶ್ ಕುಲಾಲ್, ಸದಸ್ಯರಾದ ಸದಾನಂದ ಮೂಲ್ಯ, ನಿತೇಶ್ ಕೆ.ಓಡಿಲ್ನಾಳ, ಲಕ್ಷ್ಮೀಕಾಂತ್ ಶೆಟ್ಟಿ, ಸುಮಂಗಲ ಪ್ರಭು, ಶಾಲಿನಿ ದಿನೇಶ್, ಆನಂದಿ, ಹಿರಿಯರಾದ ಬಾಬು ಶೆಟ್ಟಿ ಪಡ್ಡೈಲು, ಪಿ.ಎನ್.ರಮೇಶ್ ಆಚಾರ್ಯ ಮದ್ದಡ್ಕ, ಎಂ.ಆನಂದ ಪ್ರಭು ಮುದ್ದಡ್ಕ, ಧನಂಜಯ ಮೂಲ್ಯ ಆಲಂದಿಲ, ಅಭಿಮನ್ಯು ಮದ್ದಡ್ಕ, ಸತೀಶ್ ಕುಲಾಲ್ ಶ್ರೀ ಸಾಯಿ ಪಾದೆ, ಚಿದಾನಂದ ಕಾಯರಡ್ಕ, ಸರಸ್ವತಿ ಮದ್ದಡ್ಕ, ಶ್ರೀರಾಮ ಸೇವಾ ಸಮಿತಿ ಗೌರವಾಧ್ಯಕ್ಷ ರಾಜ್ ಪ್ರಕಾಶ್ ಪಡ್ಡೈಲು, ಪ್ರಧಾನ ಕಾರ್ಯದರ್ಶಿ ಪ್ರೀತಮ್ ಆಚಾರ್ಯ, ವಿಹಿಂಪ ಅಧ್ಯಕ್ಷ ಗಣೇಶ್ ಶೆಟ್ಟಿ ಅರ್ಕಜೆ, ಕಾರ್ಯದರ್ಶಿ ವಿನೋದ್ ಶೆಣೈ, ಬಜರಂಗದಳ ಮದ್ದಡ್ಕ ಸಂಚಾಲಕ ಯಶೋಧರ ಶೆಟ್ಟಿ ಅರ್ಕಜೆ, ಪ್ರಭಾಕರ ಶೆಟ್ಟಿ ಉಪ್ಪಡ್ಕ ಮತ್ತಿತರರು ಉಪಸ್ಥಿತರಿದ್ದರು.