ಜಿಲ್ಲೆ

ಭಜನಾ ತರಬೇತಿ ಶಿಬಿರ ಉದ್ಘಾಟನೆ

ಸೌಮ್ಯ ಆರ್

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಬಿ.ಸಿ.ರೋಡ್ ವಲಯದ ವತಿಯಿಂದ ಒಂದು ವಾರದ ಭಜನಾ ತರಬೇತಿ ಶಿಬಿರ ಬಿ.ಮೂಡ ಗ್ರಾಮದ ಗಾಣದಕೋಡಿ ಕುಟುಂಬ ಚಾವಡಿಯಲ್ಲಿ ಭಾನುವಾರ ಆರಂಭಗೊಂಡಿತು.

ಬಂಟ್ವಾಳ ಪುರಸಭಾ ಸದಸ್ಯ ಲೋಲಾಕ್ಷ ಶೆಟ್ಟಿ ಉದ್ಘಾಟಿಸಿದರು. ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ರೋನಾಲ್ಡ್ ಡಿಸೋಜ, ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ., ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ.ಅಳಿಯೂರು, ಬಿ.ಸಿ.ರೋಡ್ ವಲಯದ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಶೇಖರ್ ಸಾಮಾನಿ, ಫೋಟೋಗ್ರಾಪರ್ಸ್ ಅಸೋಸಿಯೇಶನ್ ದಕ್ಷಿಣ ಕನ್ನಡ- ಉಡುಪಿ ಜಿಲ್ಲಾ ಕಾರ್ಯದರ್ಶಿ ದಯಾನಂದ ಬಂಟ್ವಾಳ, ಭಜನಾ ತರಬೇತುದಾರ ಸಂದೇಶ್, ಗಾಣದಕೋಡಿ ಕುಟುಂಬ ಚಾವಡಿ ಸದಸ್ಯ ದಿನೇಶ್ ಶೆಟ್ಟಿ ಮೊದಲಾದವರಿದ್ದರು.

ಬಿ.ಮೂಡ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಆಶಾಲತಾ ಸ್ವಾಗತಿಸಿದರು. ಬಿ.ಸಿ.ರೋಡ್ ವಲಯ ಮೇಲ್ವಿಚಾರಕಿ ವೇದಾವತಿ ನಿರೂಪಿಸಿದರು. ಭಾರತಿ ಹರೀಶ್ ಗಾಂದೋಡಿ ವಂದಿಸಿದರು.