ಕೋಟ ಮಣೂರು ಪಡುಕರೆ ಶ್ರೀ ಉದ್ಬವಲಿಂಗೇಶ್ವರ ಭಜನಾ ಮಂದಿರ 39ನೇ ವರ್ಷದ ಭಜನಾ ಮಂಗಲೋತ್ಸವವನ್ನು ಆನಂದ ಸಿ.ಕುಂದರ್ ಉದ್ಘಾಟಿಸಿದರು.  
ಜಿಲ್ಲೆ

ಭಜನಾ ಮಂಗಲೋತ್ಸವ, ಸಾಧಕರಿಗೆ ಸನ್ಮಾನ

ಕೋಟ: ಮಣೂರು ಪಡುಕರೆ ಶ್ರೀ ಉದ್ಬವಲಿಂಗೇಶ್ವರ ಭಜನಾ ಮಂದಿರ 39ನೇ ವರ್ಷದ ಭಜನಾ ಮಂಗಲೋತ್ಸವ ಉದ್ಭವಲಿಂಗೇಶ್ವರ ವಠಾರದಲ್ಲಿ ನಡೆಯಿತು.

ಮೊದಲ ದಿನ ಭಜನಾ ಕಾರ್ಯಕ್ರಮವನ್ನು ಕೋಟದ ಅಮೃತೇಶ್ವರಿ ದೇಗುಲ ಅಧ್ಯಕ್ಷ ಆನಂದ ಸಿ.ಕುಂದರ್ ಉದ್ಘಾಟಿಸಿದರು. ಭಜನಾ ಮಂದಿರ ಅಧ್ಯಕ್ಷ ನವೀನ ಕುಮಾರ್, ಗೌರವಾಧ್ಯಕ್ಷ ಹರೀಶ್ ಕುಮಾರ, ಕೋಟ ಮೆಸ್ಕಾಂನ ದಿನೇಶ ಪುತ್ರನ್ ವಿಠಲವಾಡಿ, ಭಜನಾ ಮಂದಿರದ ಪ್ರಮುಖರಾದ ಪ್ರಮೋದ್, ವಿಜಯ ವಿನಯ, ಚೈತ್ರಾ, ಯೊಗೇಶ ಉಪಸ್ಥಿತರಿದ್ದರು.

ಎರಡನೇ ದಿನದ ಕಾರ್ಯಕ್ರಮವನ್ನು ಶಾಸಕ ಕಿರಣ್ ಕುಮಾರ ಕೊಡ್ಗಿ ಉದ್ಘಾಟಿಸಿದರು. ಕ್ರೀಡಾ ಸಾಧಕಿ ಸೃಜನಾ ಎಸ್.ಪಿ., ಕೊಲ್ಲೂರು ಠಾಣೆ ಪಿಎಸ್‌ಐ ಸುಧಾರಾಣಿ, ಕೋಟ ಶಾಖೆ ಮೆಸ್ಕಾಂ ನೌಕರರು, ಸ್ಥಳೀಯ ಪ್ರತಿಭೆಗಳನ್ನು ಸನ್ಮಾನಿಸಲಾಯಿತು. ಜನಸೇಅ ಟ್ರಸ್ಟ್ ಪ್ರವರ್ತಕ ವಸಂತ ಗಿಳಿಯಾರ, ವಕೀಲ ಬಿ.ಎಸ್.ಕಾಳವರಕ್ಕರ್, ವಿದ್ವಾನ್ ದಾಮೋದರ್ ಶರ್ಮ ಉಪಸ್ಥಿತರಿದ್ದರು.