ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಶ್ರೀಕ್ಷೇತ್ರ ಧರ್ಮಸ್ಥಳ ವತಿಯಿಂದ 26ನೇ ವರ್ಷದ ಭಜನಾ ತರಬೇತಿ ಕಮ್ಮಟ ಸೆ.22ರಿಂದ 29ರವರೆಗೆ ನಡೆಯಲಿದೆ.
22ರಂದು ಬೆಳಗ್ಗೆ 11 ಗಂಟೆಗೆ ಶ್ರೀ ೇತ್ರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ, ಮೂಡುಬಿದಿರೆ ಶ್ರೀ ಜೈನ ಮಠದ ಜಗದ್ಗುರು ಡಾ.ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಉದ್ಘಾಟಿಸುವರು. ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಪಾಧ್ಯಕ್ಷೆ ಡಾ.ಹೇಮಾವತಿ ವೀ.ಹೆಗ್ಗಡೆ, ಡಿ.ಹರ್ಷೇಂದ್ರ ಕುಮಾರ್ ಭಾಗವಹಿಸಲಿದ್ದಾರೆ.
23ರಂದು ಮಧ್ಯಾಹ್ನ 12 ಗಂಟೆಗೆ ಉಪನ್ಯಾಸ ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾೃಸ್ ಅವರಿಂದ ಆರೋಗ್ಯಕರ ಅಭ್ಯಾಸಗಳು ಜನಜಾಗೃತಿ ಚಲನಚಿತ್ರ ಪ್ರದರ್ಶನಗೊಳ್ಳಲಿದೆ. ರಾತ್ರಿ 7.30ರಿಂದ ಉಜಿರೆ ಎಸ್ಡಿಎಂ ರಂಗಶಿಕ್ಷಣ ಕೇಂದ್ರದಿಂದ ಬೇಂದ್ರೆ ನಾಟಕ ಪ್ರದರ್ಶನ ನಡೆಯಲಿದೆ.
24ರಂದು ಹವ್ಯಾಸಿ ಯಕ್ಷಗಾನ ಕಲಾವಿದ ಉಜಿರೆ ಅಶೋಕ್ ಭಟ್, ಭಜನಾ ಮಂಡಳಿಗಳಲ್ಲಿ ಧಾರ್ಮಿಕ ಆಚರಣೆಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಸಂಜೆ 5.30ರಿಂದ ಕೇಂದ್ರ ಸ್ಥಾನದಲ್ಲಿ ಭಜನಾ ಕಾರ್ಯಕ್ರಮ, ರಾತ್ರಿ 7.30ರಿಂದ ಸುನೀಲ್ ಧರ್ಮಸ್ಥಳ ಅವರಿಂದ ರಂಗಗೀತೆ ಹಾಗೂ ವಿವಿಧ ಗೀತೆಗಳ ಪ್ರಾತ್ಯಕೆ ನಡೆಯಲಿದೆ.
25ರಂದು ಶ್ರೀಕ್ಷೇತ್ರ ಧ.ಗ್ರಾ.ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಅವರಿಂದ ಶ್ರೀ ೇತ್ರ ಧರ್ಮಸ್ಥಳದಿಂದ ಸಮಾಜದ ಇತರ ೇತ್ರಗಳಿಗೆ ನೀಡಿದ ಧಾರ್ಮಿಕ, ಸಾಮಾಜಿಕ ಕೊಡುಗೆಗಳು ಕುರಿತು ಉಪನ್ಯಾಸ, ಸಂಜೆ 5.30ರಿಂದ ಸಹ್ಯಾದ್ರಿ, ರಜತಾದ್ರಿ, ಜೋಡುಸ್ಥಾನ, ಪೂರ್ಜೆಬೈಲು, ನಡುಗುಡ್ಡೆ, ರಜತಗಿರಿ ಮೊದಲಾದ ಕಡೆಗಳಲ್ಲಿ ಭಜನಾ ತಂಡದ ಶಿಬಿರಾರ್ಥಿಗಳಿಂದ ನಗರ ಭಜನೆ, ರಾತ್ರಿ 7.30ರಿಂದ ಧರ್ಮಸ್ಥಳ ರಂಗಶಿವ ಕಲಾಬಳಗದಿಂದ ಕೇಳೆಸಖೆ ಚಂದ್ರಮುಖಿ ನಾಟಕ ಪ್ರದರ್ಶನ ನಡೆಯಲಿದೆ.
26ರಂದು ಉಪನ್ಯಾಸಕ ಪವನ್ ಕಿರಣ್ಕೆರೆ ಉಡುಪಿ ಇವರಿಂದ ಭಜನೆ ಮತ್ತು ಬದುಕು ಎಂಬ ವಿಷಯದ ಕುರಿತು ಉಪನ್ಯಾಸ, ಸಂಜೆ 5.30ರಿಂದ ಶರಾವತಿ, ಸಾಕೇತ, ಗಂಗೋತ್ರಿ, ಮಿಥಿಲಾನಗರ, ಮಂಜುಶ್ರೀ ನಗರ, ಪ್ರೀತಿನಗರ, ನೇತ್ರಾವತಿ, ವೈಶಾಲಿ, ಬಸದಿ, ಮೂಡಂಗಲ್ಲು ಮೊದಲಾದೆಡೆ ಭಜನಾ ತಂಡದ ಶಿಬಿರಾರ್ಥಿಗಳಿಂದ ನಗರ ಭಜನೆ ನಡೆಯಲಿದೆ. ರಾತ್ರಿ 7.30ರಿಂದ ಉಜಿರೆ ಎಸ್ಡಿಎಂ ಕಲಾಕೇಂದ್ರದವರಿಂದ ಸುಧನ್ವ ಮೋಕ್ಷ ಯಕ್ಷಗಾನ ಪ್ರದರ್ಶನ ನಡೆಯಲಿದೆ.
27ರಂದು ನಿವೃತ್ತ ಮುಖ್ಯಶಿಕ್ಷಕ ಮುನಿರಾಜ ರೆಂಜಾಳರಿಂದ ಸಾಮಾಜಿಕ ಸಾಮರಸ್ಯ ಮೂಡಿಸುವಲ್ಲಿ ಭಜನೆಯ ಪಾತ್ರ ಎಂಬ ವಿಷಯದ ಕುರಿತು ಉಪನ್ಯಾಸ ನಡೆಯಲಿದೆ. ಕಲ್ಲೇರಿ, ಅಶೋಕನಗರ, ಗಾತ್ರಿ, ಸನ್ನಿಧಿ, ಅಗ್ರಹಾರ ಮೊದಲಾದೆಡೆ ಭಜನಾ ತಂಡದ ಶಿಬಿರಾರ್ಥಿಗಳಿಂದ ನಗರ ಭಜನೆೆ, ಉಜಿರೆ ಎಸ್ಡಿಎಂ ನ್ಯಾಚುರೋಪತಿ ಕಾಲೇಜು ವತಿಯಿಂದ ಸಾಂಸತಿಕ ಕಾರ್ಯಕ್ರಮ ನಡೆಯಲಿದೆ.
28ರಂದು ಹೇಮಾವತಿ ವೀ.ಹೆಗ್ಗಡೆ ಅವರಿಂದ ಭಜನಾ ಸಂಸತಿ ಬೆಳೆಸುವಲ್ಲಿ ಭಜನಾ ಮಂಡಳಿಗಳ ಪಾತ್ರ ಮಾರ್ಗದರ್ಶನ ಮಾತು, ಬಾಹುಬಲಿ ಬೆಟ್ಟ, ರಥಬೀದಿ, ಬೀಡಿನ ಅಂಗಲ, ಬಾಹುಬಲಿ ಬೆಟ್ಟ ಮುಖ್ಯ ಬೀದಿ, ಮೊದಲಾದ ಕಡೆಗಳಲ್ಲಿ ಭಜನಾ ತಂಡದ ಶಿಬಿರಾರ್ಥಿಗಳಿಂದ ನಗರ ಭಜನೆ ನಡೆಯಲಿದೆ.
29ರಂದು ಬೆಳಗ್ಗೆ 9.30ಕ್ಕೆ ದ.ಕ ಹಾಗೂ ಉಡುಪಿ ಜಿಲ್ಲೆಯ ಆಯ್ದ ಭಜನಾ ಮಂಡಳಿಗಳಿಂದ ಆಗಮಿಸುವ ಸುಮಾರು 300 ಭಜನಾ ತಂಡಗಳ 5000 ಭಜನಾಪಟುಗಳಿಂದ ಶೋಭಾಯಾತ್ರೆ ಹಾಗೂ ಶ್ರೀೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಭಜನೆಯೊಂದಿಗೆ ನೃತ್ಯ ಭಜನೆ ನಡೆಯಲಿದೆ. 11 ಗಂಟೆಯಿಂದ ಶ್ರೀೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಕುಂಡಗೋಳ ಕಲ್ಯಾಣಪುರ ತ್ರಿವಿಧ ದಾಸೋಹಿ ಪರಮಪೂಜ್ಯ ಶ್ರೀ ಬಸವಣ್ಣಜ್ಜ ಸಾನ್ನಿಧ್ಯ ವಹಿಸಲಿದ್ದಾರೆ. ಶ್ರೀ ೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಸಂಸದ ಕ್ಯಾ.ಬ್ರಿಜೇಶ್ ಚೌಟ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ವಿ.ಪ ಸದಸ್ಯರಾದ ಪ್ರತಾಪ್ಸಿಂಹ ನಾಯಕ್, ಕೆ.ಹರೀಶ್ ಕುಮಾರ್, ಶ್ರೀ ಧಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಪಾಧ್ಯಕ್ಷೆ ಡಾ.ಹೇಮಾವತಿ ವೀ.ಹೆಗ್ಗಡೆ, ಡಿ.ಹರ್ಷೇಂದ್ರ ಕುಮಾರ್, ಅಧ್ಯಕ್ಷ ಚಂದ್ರಶೇಖರ ಸಾಲಿಯಾನ್, ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್, ಕಾರ್ಯದರ್ಶಿ ಎ.ವಿ.ಶೆಟ್ಟಿ ಹಾಗೂ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಭಜನಾ ತರಬೇತುದಾರರಾದ ರಾಮಕೃಷ್ಣ ಕಾಟುಕುಕ್ಕೆ ಕಾಸರಗೋಡು, ಸಂಗೀತ ವಿದುಷಿ ಉಷಾ ಹೆಬ್ಬಾರ್ ಮಣಿಪಾಲ, ಗಾಯಕ ಉಪ್ಪುಂದ ರಾಜೇಶ್ ಪಡಿಯಾರ್ ಮೈಸೂರು, ಸಂಗೀತ ವಿದುಷಿ ಅನುಸೂಯ ಪಾಠಕ್ ಉಜಿರೆ, ಆಕಾಶವಾಣಿ ಕಲಾವಿದ ಕೆ.ಆರ್.ರಾವೇಂದ್ರ ಮಣಿಪಾಲ, ಸಂಗೀತ ಶಿಕ್ಷಕಿ ಮನೋರಮಾ ತೋಳ್ಪಾಡಿತ್ತಾಯ ಧರ್ಮಸ್ಥಳ, ಶಾಂತಿವನ ಟ್ರಸ್ಟ್ ಯೋಗ ನಿರ್ದೇಶಕ ಡಾ.ಐ.ಶಶಿಕಾಂತ್ ಜೈನ್, ಸೌಮ್ಯಾ ಸುಭಾಷ್ ಧರ್ಮಸ್ಥಳ, ಮಂಗಲದಾಸ ಗುಲ್ವಾಡಿ ಮಂಗಳೂರು, ಎಂ.ನಾಗೇಶ್ ಶೆಣೈ ಮಂಗಳೂರು, ರವಿರಾಜ್ ಉಜಿರೆ, ಸಂದೇಶ ಉಜಿರೆ, ಎಸ್ಡಿಎಂ ಕಲಾವಿಭಾಗದ ವಿನ್ಯಾಸ್, ರಂಗನಿರ್ದೇಶಕ ಸುನೀಲ್ ಶೆಟ್ಟಿ ಮೊದಲಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.