ಜಿಲ್ಲೆ

ಗುರುತತ್ವ ನೆಲೆಯೂರಿದರೆ ಮಾನವೀಯ ಪ್ರಾಬಲ್ಯ : ಗಣೇಶ್ ಪೂಂಜರೆಕೋಡಿ ಅಭಿಪ್ರಾಯ

ಸೌಮ್ಯ ಆರ್

ಬಂಟ್ವಾಳ : ನಾರಾಯಣಗುರುಗಳ ತತ್ವಗಳು ಯುವ ಮನಸ್ಸುಗಳಲ್ಲಿ ನೆಲೆಯೂರಿದರೆ, ಬಾಹ್ಯ ವೈಷಮ್ಯಗಳಿಗಿಂತ ಒಳಗಿನ ಮಾನವೀಯ ಪ್ರಾಬಲ್ಯ ಪಡೆಯುತ್ತದೆ ಎಂದು ಯುವವಾಹಿನಿ ಕೇಂದ್ರ ಸಮಿತಿ ನಿರ್ದೇಶಕ ಗಣೇಶ್ ಪೂಂಜರೆಕೋಡಿ ಹೇಳಿದರು.

ನರಿಕೊಂಬು ಗ್ರಾಪಂ ಅಧ್ಯಕ್ಷ ಸಂತೋಷ್ ಕುಮಾರ್ ಅವರ ಶಂಬೂರು ಅಡ್ಡದಪಾದೆ ಮನೆಯಲ್ಲಿ ಯುವವಾಹಿನಿ ಬಂಟ್ವಾಳ ಘಟಕ ಆಶ್ರಯದಲ್ಲಿ ಗುರುತತ್ವವಾಹಿನಿ ಭಜನಾ ಸಂಕೀರ್ತನೆ ಮಾಲಿಕೆ 57ರಲ್ಲಿ ಗುರುಸಂದೇಶ ನೀಡಿದರು.

ಯುವವಾಹಿನಿ ಬಂಟ್ವಾಳ ಘಟಕ ಕೋಶಾಧಿಕಾರಿ ನವೀನ್ ಪೂಜಾರಿ, ನಿರ್ದೇಶಕ ಮಹೇಶ್ ಬೊಳ್ಳಾಯಿ, ಚಿನ್ನಾ ಕಲ್ಲಡ್ಕ, ಸಂಘಟನಾ ಕಾರ್ಯದರ್ಶಿ ಯಶೋಧರ ಕಡಂಬಳಿಕೆ, ಸದಸ್ಯರಾದ ನಾಗೇಶ್ ಪೂಜಾರಿ ಏಲಾಬೆ, ಸುನೀಲ್ ಮರ್ದೋಳಿ, ಪ್ರಶಾಂತ್ ಅಮೀನ್ ಏರಮಲೆ, ಯತೀಶ್ ಬೊಳ್ಳಾಯಿ, ಮಾಜಿ ಅಧ್ಯಕ್ಷರಾದ ಅರುಣ್ ಕುಮಾರ್, ನಾಗೇಶ್ ಪೊನ್ನೋಡಿ, ಶಿವಾನಂದ ಎಂ, ಹರೀಶ್ ಕೋಟ್ಯಾನ್ ಕುದನೆ ಮತ್ತಿತರರು ಉಪಸ್ಥಿತರಿದ್ದರು. ಬಂಟ್ವಾಳ ಘಟಕ ಸಮಾಜ ಸೇವಾ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿದರು. ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಹರೀಶ್ ಸಾಲ್ಯಾನ್ ಅಜೆಕಲ ವಂದಿಸಿದರು.

ಸಮಾನತೆ, ಸೌಹಾರ್ದ ಮತ್ತು ನೈತಿಕತೆ ಬೆಳೆಯುವ ಸಮಾಜವೇ ನಿಜವಾದ ನಾರಾಯಣಗುರುಗಳ ಕನಸಿನ ಭಾರತ. ಅವರ ಸಂದೇಶವನ್ನು ಯುವ ಪೀಳಿಗೆಗೆ ದಾಟಿಸುವ ಕಾರ್ಯ ಅತ್ಯಗತ್ಯ ಮಾತ್ರವಲ್ಲ ಅದು ಭವಿಷ್ಯದ ಶಾಂತಿ ಮತ್ತು ಸಮಾನತೆಗೆ ಮೂಲಾಧಾರ. ಗಣೇಶ್ ಪೂಂಜರೆಕೋಡಿ ಯುವವಾಹಿನಿ ಕೇಂದ್ರ ಸಮಿತಿ ನಿರ್ದೇಶಕ https://www.vijayavani.net/nmpa-signs-rs-53000-crore-worth-of-contracts https://www.vijayavani.net/tulu-learning-workshop-launched-for-mangalore-special-task-force-police