ಜಿಲ್ಲೆ

ಬಸವಮಾರ್ಗ ವ್ಯಸನ ಮುಕ್ತ ಹಾಗೂ ಪುನರ್ವಸತಿ ಕೇಂದ್ರದಲ್ಲಿ ಭಜನೆ ಕಾರ್ಯಕ್ರಮ

ಬಸವಮಾರ್ಗ ವ್ಯಸನ ಮುಕ್ತ ಹಾಗೂ ಪುನರ್ವಸತಿ ಕೇಂದ್ರದಿಂದ ಆಯೋಜಿಸಿರುವ 10 ದಿನಗಳ ಸಂಪೂರ್ಣ ಉಚಿತ ಕುಡಿತ ಬಿಡಿಸುವ ಶಿಬಿರದ ಅಂಗವಾಗಿ ಗುರುವಾರ ಹೆಬ್ಬಾಳಿನಲ್ಲಿ ಇರುವ ಶಾಖೆಗಳಲ್ಲಿ ಭಜನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಬೆಂಗಳೂರಿನ ವಿವೇಕಾಹಂಸ ಭಜನಾ ಮಂಡಳಿಯ ಸದಸ್ಯರು, 4 ಗಂಟೆಗಳ ಕಾಲ ತಮ್ಮ ಭಕ್ತಿ ಗಾನ ಸುಧೆಯನ್ನು ಹರಿಸಿದರು. ಶಿಬಿರದಲ್ಲಿ ಪಾಲ್ಗೊಂಡಿರುವವರು ಭಜನೆಯ ತಾಳಕ್ಕೆ ಹಾಡಿ, ಕುಣಿದು, ನಲಿದಾಡಿದರು.

ಬಸವಮಾರ್ಗ ಸಂಸ್ಥೆಯ ಮುಖ್ಯಸ್ಥ ಬಸವಣ್ಣ ಕಾರ್ಯಕ್ರಮದಲ್ಲಿ ಇದ್ದರು.