ಕಂಪ್ಲಿಯಲ್ಲಿ ಶ್ರೀ ಬಾಬಾ ರಾಮದೇವ್ ಜಯಂತಿ ನಿಮಿತ್ತ ಅಖಂಡ ಭಜನೆ ನಡೆಯಿತು. ಕುಲದೀಪ್ ಓಜಾ, ಮಹೇಂದರ್ ಪಟೇಲ್, ತಾರಸಂದ್ ಮಾಲಿ ಇದ್ದರು. 
ಜಿಲ್ಲೆ

ಲೋಕ ಕಲ್ಯಾಣಾರ್ಥ ಭಜನೆ

ಕಂಪ್ಲಿ: ಶ್ರೀ ಬಾಬಾ ರಾಮದೇವ್ ಜಯಂತಿ ನಿಮಿತ್ತ ಪಟ್ಟಣದ ಶ್ರೀ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ರಾಮದೇವ್ ಸೇವಾ ಮಂಡಳಿಯಿಂದ ಮಂಗಳವಾರ ಅಖಂಡ ಭಜನೆ ನಡೆಯಿತು. ಮಂಡಳಿ ಸದಸ್ಯ ಮಾನ್‌ಸಿಂಗ್ ರಜಪೂತ್ ಮಾತನಾಡಿ, ಲೋಕ ಕಲ್ಯಾಣಾರ್ಥ, ಸಮೃದ್ಧ ಮಳೆ-ಬೆಳೆಗೆ ಪ್ರಾರ್ಥಿಸಿ ಭಜನೆ ಏರ್ಪಡಿಸಲಾಗಿತ್ತು ಎಂದರು. ಜೋಧಪುರದ ಕುಲದೀಪ್ ಓಜಾ, ಚಾಚೋರ್‌ನ ಮಹೇಂದರ್ ಪಟೇಲ್, ರಾಬುರೋಡಿನ ರೇಖಾ ಪರಮಾರ ಇತರರು ಅಖಂಡ ಭಜನೆ ನರವೇರಿಸಿದರು. ಪ್ರಮುಖರಾದ ಓಂಸಿಂಗ್ ಪುರೋಹಿತ್, ಗುರಾರಾಮ್ ಚೌದ್ರಿ, ಸೀಮ್ನಾರಾಮ್ ಪಟೇಲ್, ಪೇರಾರಾಮ್ ಚೌದ್ರಿ, ರಾಜು ಪ್ರಜಾಪತ್ ಕುಂಬಾರ್, ಸೋಮರಾಮ್ ಸುತಾರ್, ಸುಖ್‌ದೇವ್ ಜಾಟ್, ಮೂಲರಾಮ್ ಚೌದ್ರಿ, ಕುವಾರಾಮ್ ಚೌದ್ರಿ, ದಿನೇಶ್ ಚೌದ್ರಿ, ಉಮೇದ್‌ಸಿಂಗ್ ರಾಠೋಡ್ ಇತರರಿದ್ದರು.