ಜಿಲ್ಲೆ

ಭೈರವದುರ್ಗ ಬೆಟ್ಟಕ್ಕೆ ಬೆಂಕಿ ಹತೋಟಿಗೆ ಅಗ್ನಿ ಸಾಮಕ ಸಿಬ್ಬಂದಿ ಹರ ಸಾಹಸ

ಗಂಗಾಧರ ಬಿ ವಿ

ಮಾಗಡಿ.ಕುದೂರು ಇತಿಹಾಸ ಪ್ರಸಿದ್ಧ ಭೈರವದುರ್ಗ ಬೆಟ್ಟದಲ್ಲಿ ರಾತ್ರಿ ಬೆಂಕಿ ಕಾಣಿಸಿಕೊಂಡಿತ್ತು. ಸುಮಾರು ಗಂಟೆಗಳ ಕಾಲ ಹರಸಾಹಸಪಟ್ಟು ಬೆಂಕಿಯನ್ನು ಹತೋಟಿಗೆ ತರಲು ಅರಣ್ಯ ಇಲಾಖೆ ಸಿಬ್ಬಂದಿ ಪ್ರಯತ್ನಿಸಿದ್ದಾರೆ. 

ಒಣ ಸಸ್ಯಗಳು ಮತ್ತು ಪೊದೆಗಳಿಗೆ ಹರಡಿದ ಬೆಂಕಿಯನ್ನು ನಂದಿಸಲು ರಾತ್ರಿ ಇಡೀ ಅರಣ್ಯ ಇಲಾಖೆ ಶ್ರಮಿಸಿದೆ. ಆಗಾಗ ಕೆಲ ಕಿಡಿಗೇಡಿಗಳು ಭೈರವದುರ್ಗ ಬೆಟ್ಟದಲ್ಲಿ ಬೆಂಕಿ ಹಚ್ಚುವ ಕೃತ್ಯಕ್ಕೆ ಕೈ ಹಾಕುತ್ತಿದ್ದು, ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀರು ಒತ್ತಾಯಿಸಿದ್ದಾರೆ. ಸ್ಥಳೀಯರಿಗೆ ಈ ಬಗ್ಗೆ ಆತಂಕ ಹೆಚ್ಚಾಗಿದೆ.

ಬೆಟ್ಟಗಳ ಮೇಲಿನ ಒಣ ಹುಲ್ಲಿಗೆ ಸಂಜೆ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ ಬೆಟ್ಟದ ತಪ್ಪಲಿನ ನಿವಾಸಿಗಳು ಅರಣ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅರಣ್ಯ ಸಿಬ್ಬಂದಿಯೊಂದಿಗೆ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಬೆಂಕಿಯನ್ನು ನಂದಿಸಲು ಕಾರ್ಯಾಚರಣೆ ಆರಂಭಿಸಿದರು. 

ಚಳಿಗಾಲ ಮುಗಿದು ಬೇಸಿಗೆ ಸನಿಹವಾಗುತ್ತಿರುವ ಹಿನ್ನೆಲೆಯಲ್ಲಿ ಹವಾಮಾನಕ್ಕನುಗುಣವಾಗಿ ಸಸ್ಯಗಳು ಒಣಗುತ್ತಿವೆ. ಈ ಸಂದರ್ಭ ಬೆಟ್ಟದಲ್ಲಿ ಬೆಂಕಿ ಕಣಿಸಿಕೊಂಡಿರುವುದು ಪರಿಸರ ಪ್ರೇಮಿಗಳಲ್ಲಿ ಆತಂಕ ಸೃಷ್ಟಿಸಿದೆ.

ಒಮ್ಮೆಗೆ ಎಲ್ಲೆಡೆಯೂ ಬೆಂಕಿ ಸುತ್ತುವರೆದರೆ ಪೊದೆಗಳಲ್ಲಿ ಮೊಲ, ಉಡ, ಮುಂಗುಸಿ, ಚಿಪ್ಪು ಹಂದಿ, ಇಲಿ ಮತ್ತು ಹಾವುಗಳಂತಹ ಜೀವ ಸಂಕುಲಗಳು ವಾಸಿಸುವುದರಿಂದ ಜೀವ ವೈವಿಧ್ಯದ ದಹನವಾಗುತ್ತದೆ. ಅಲ್ಲದೆ ಕೆಲವೇ ಕೆಲವು ಕಡೆಗಳಲ್ಲಿ ಸಿಗುವ ಜಾಲಾರ ಹೂವಿನ ಮರಗಳು ಬೆಂಕಿಗಾಹುತಿಯಾಗುತ್ತಿವೆ ಎಂದು ಪರಿಸರ ಪ್ರೇಮಿಗಳು ವಿಷಾಧ ವ್ಯಕ್ತಪಡಿಸಿದ್ದಾರೆ.