ಅರಕೇರಾ: ಪಟ್ಟಣದ ಆರಾಧ್ಯ ದೇವತೆ ಶ್ರೀ ಭಾಗ್ಯವಂತಿ ದೇವಸ್ಥಾನದ ದೇವಿಯ ಬೆಳ್ಳಿ ಮೂರ್ತಿ ತಯಾರಿಗೆ ಎ.ವೆಂಕಟೇಶ ನಾಯಕ ಫೌಂಡೇಷನ್‌ನಿಂದ ಐದೂವರೆ ಕೆಜಿ ಬೆಳ್ಳಿಯನ್ನು ಮಾಜಿ ಸಂಸದ ಬಿ.ವಿ. ನಾಯಕ, ಆರ್‌ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ರಾಜಶೇಖರ ನಾಯಕ ಭಾನುವಾರ ದೇಣಿಗೆ ನೀಡಿದರು. ಬಳಿಕ ವಿಶೇಷ ಪೂಜೆ ನೆರವೇರಿಸಿ ದೇವಿ ಮೂರ್ತಿ ತಯಾರಿಗೆ ಗುಂತಕಲ್ ಮೂಲದ ಕರ ಕುಶಲಕರ್ಮಿ ವೀರಭದ್ರ ಆಚಾರಿಗೆ ಒಪ್ಪಿಸಿದರು.
ಜೂ.3 ಕ್ಕೆ ದೇವಿ ಜಾತ್ರೆ ನಡೆಯಲಿದೆ. ಜಿಪಂ ಮಾಜಿ ಸದಸ್ಯ ಸತ್ಯನಾರಾಯಣ ನಾಯಕ ಪೊಲೀಸ್ ಪಾಟೀಲ್, ನಿವೃತ್ತ ಬ್ಯಾಂಕ್ ಅಧಿಕಾರಿ ಕೆ.ಅನಂತರಾಜ ನಾಯಕ, ಗ್ರಾಪಂ ಮಾಜಿ ಅಧ್ಯಕ್ಷ ತಿಮ್ಮಪ್ಪ ನಾಯಕ ಪೊಲೀಸ್ ಪಾಟೀಲ್, ನಿವೃತ್ತ ಉಪನ್ಯಾಸಕ ವೆಂಕಟೇಶ ನಾಯಕ ದೊರೆ, ಪ್ರಥಮ ದರ್ಜೆ ಗುತ್ತಿಗೆದಾರ ಸೀತಣ್ಣ ನಾಯಕ ಗುರಿಕಾರ, ಪ್ರಮುಖರಾದ ಬಸವರಾಜ ಪೂಜಾರಿ, ಬಸವರಾಜ ಕ್ವಾಟೆ ದೊರೆ, ರಾಕೇಶ ಗೌಡ ಪೊಲೀಸ್ ಪಾಟೀಲ್, ಮಹಾಂತೇಶ ಪೂಜಾರಿ, ಮೆಹಬೂಬ್ ಸಾಬ್ ಖಾಜಿ, ನಾಗರಾಜ ಕರ್ನಾಳ, ಪ್ರಭಾಕರ ಪತ್ತಾರ ಇತರರಿದ್ದರು.