ಮಸ್ಕಿ ಪುರಸಭೆಗೆ ಬಿಜೆಪಿ ಅಭ್ಯರ್ಥಿ ಭಾಗ್ಯಶ್ರೀ ಕೇಶವಮೂರ್ತಿ ಜಯಗಳಿಸಿದ ಹಿನ್ನಲೆಯಲ್ಲಿ ಬಿಜೆಪಿ ಕಾರ್ಯರ್ತರು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಅವರನ್ನು ಸನ್ಮಾನಿಸಿದರು. ಮುಖಂಡರಾದ ಡಾ.ಬಿ.ಎಚ್.ದಿವಟರ್, ಪಂಪಣ್ಣ ಗುಂಡಳ್ಳಿ, ಯಲ್ಲೋಜಿರಾವ್ ಕೊರೆಕರ್, ರವಿಗೌಡ ಪಾಟೀಲ, ಪ್ರಸನ್ನ ಪಾಟೀಲ, ಮೌನೇಶ ನಾಯಕ, ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ಪುರಸಭೆ ಸದಸ್ಯರಾದ ಶರಣಯ್ಯ ಸೊಪ್ಪಿಮಠ, ಚೇತನ ಪಾಟೀಲ, ಮೌನೇಶ ಮುರಾರಿ, ರೇಣುಕಾ ಉಪ್ಪಾರ ಇತರರಿದ್ದರು. 
ಜಿಲ್ಲೆ

ಭಾಗ್ಯಶ್ರೀ ಕೇಶವಮೂರ್ತಿ ಸದಸ್ಯರಾಗಿ ಆಯ್ಕೆ

ರುದ್ರಪ್ಪ ವಾಲಿ

ಮಸ್ಕಿ: ಪಟ್ಟಣದ 3ನೇ ವಾರ್ಡ್‌ಗೆ ಬಿಜೆಪಿ ಅಭ್ಯರ್ಥಿ ಭಾಗ್ಯಶ್ರೀ ಕೇಶವಮೂರ್ತಿ ಸದಸ್ಯರಾಗಿ ಆಯ್ಕೆ ಆಗಿದ್ದಾರೆ.

ನ.23 ರಂದು ಚುನಾವಣೆ ನಡೆದಿತ್ತು. ಮತ ಎಣಿಕೆ ಮಂಗಳವಾರ ನಡೆಯಿತು. ಭಾಗ್ಯಶ್ರೀ 335 ಮತ ಪಡೆದರೆ, ಕಾಂಗ್ರೆಸ್‌ನ ದುರಗಮ್ಮ 309 ಮತ ಪಡೆದು ಪರಾಭವಗೊಂಡಿದ್ದಾರೆ. ಸದಸ್ಯೆ ಭಾಗ್ಯಶ್ರೀ ಹಾಗೂ ಬಿಜೆಪಿ ಕಾರ್ಯಕರ್ತರು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಅವರನ್ನು ಸನ್ಮಾನಿಸಿದರು.

ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಮಾತನಾಡಿ, 3ನೇ ವಾರ್ಡ್‌ನ ಮತದಾರರು ಬಿಜೆಪಿ ಮೇಲಿನ ಅಭಿಮಾನದಿಂದ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದು ವಾರ್ಡ್‌ನ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಜನ ಸೇವೆ ಮಾಡುವಂತೆ ಭಾಗ್ಯಶ್ರೀಗೆ ತಿಳಿಸಿದರು.