ಇಟಗಿ: ಸಮೀಪದ ಗಂದಿಗವಾಡ ಗ್ರಾಮದ ಶ್ರೀ ಭಾಗ್ಯಜ್ಯೋತಿ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂದ ಆಡಳಿತ ಮಂಡಳಿಯ ಮುಂಬರುವ ಐದು ವರ್ಷಗಳ ಅವಧಿಗೆ ಜರುಗಿದ ಚುನಾವಣೆ ಲಿತಾಂಶ ಈಚೆಗೆ ಪ್ರಕಟವಾಗಿದ್ದು, ಅಶೋಕ ಮೂಲಿಮನಿ ನೇತತ್ವದ ಭಾಗ್ಯಜ್ಯೋತಿ ವಿಕಾಸ ಪೆನಲ್ ಅಭ್ಯರ್ಥಿಗಳು ಸ್ಪಷ್ಟ ಬಹುಮತ ಪಡೆದಿದ್ದಾರೆ.
ಒಟ್ಟು 13 ಸ್ಥಾನಗಳಲ್ಲಿ 12 ಸ್ಥಾನಗಳಿಗೆ ಚುನಾವಣೆ ನಡಿದಿತ್ತು. ಅಶೋಕ ಮೂಲಿಮನಿ ನೇತತ್ವದ ಭಾಗ್ಯಜ್ಯೋತಿ ವಿಕಾಸ ಪೆನಲ್ನ 12 ಅಭ್ಯರ್ಥಿಗಳು ಜಯಶಾಲಿಯಾಗಿ ಸ್ಪಷ್ಟ ಬಹುಮತ ಗಳಿಸಿದ್ದಾರೆ. ಭಾಗ್ಯಜ್ಯೋತಿ ವಿಕಾಸ ಪೆನಲ್ನಿಂದ ಅಶೋಕ ಮೂಲಿಮನಿ, ಅನಿಲ ಕುಡಚಿ, ಪ್ರಕಾಶ ಹುಂಡೇಕಾರ, ಮತ್ಯುಂಜಯ ದೇಸಾಯಿ, ರುದ್ರಪ್ಪ ಚಳಕಿ, ವಿಜಯ ಯಮಕನಮರ್ಡಿ, ನಾಗವೇಣಿ ಮೂಲಿಮನಿ, ಸಂಗೀತಾ ಂಡಿ, ಬಾಬುಲಾಲ ಬಾಗವಾನ, ಈರಪ್ಪ ಮೂಲಿಮನಿ, ಕಿರಣ ಕುರೇರ ಆಯ್ಕೆಯಾಗಿದ್ದು, ಅವಿರೋಧವಾಗಿ ಅಶೋಕ ಪೂಜೇರ ಆಯ್ಕೆಯಾಗಿದ್ದಾರೆ. ಚುನಾವಣೆ ಅಧಿಕಾರಿಯಾಗಿ ಎನ್. ಎಲ್. ಹುಲಕುಂದ ಕಾರ್ಯನಿರ್ವಹಿಸಿದರು. ನಂತರ ವಿಜಯಿ ಅಭ್ಯರ್ಥಿಗಳು ವಿಜಯೋತ್ಸವ ಆಚರಿಸಿದರು.