ಜಿಲ್ಲೆ

ಭಾಗವತ ಪಂಚಮ ಸ್ಕಂದ ಪ್ರವಚನ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ದುರ್ಗದಬೈಲ್ ಹತ್ತಿರದ ಗವಳಿ ಗಲ್ಲಿಯಲ್ಲಿರುವ ಶ್ರೀ ವೆಂಕಟೇಶ ದೇವರ ದೇವಸ್ಥಾನದಲ್ಲಿ 2025- 26ರ ಪರ್ಯಾಯ ಮಹೋತ್ಸವ ನಿಮಿತ್ತ ಸಮಗ್ರ ಭಾಗವತ ಪ್ರವಚನ ಯಜ್ಞ, ಪಂಚಮ ಸ್ಕಂದ ಪ್ರವಚನ ಕಾರ್ಯಕ್ರಮ ಆಗಸ್ಟ್ 2ರಿಂದ ಐದು ದಿನಗಳ ಕಾಲ ಏರ್ಪಡಿಸಲಾಗಿದೆ.

ನಿತ್ಯ ಸಂಜೆ 6.30ಕ್ಕೆ ಭಾಗವತ ಪಂಚಮ ಸ್ಕಂದ ಕುರಿತು ಪಂ. ಸುಘೋಷಾಚಾರ್ಯ ಕೊರ್ಲಹಳ್ಳಿ ಪ್ರವಚನ ನೀಡುವರು. ಪರ್ಯಾಯ ಮಹೋತ್ಸವ ಅಂಗವಾಗಿ ಒಂದು ವರ್ಷ ಕಾಲ ಅನೇಕ ಪಂಡಿತರಿಂದ ಸಮಗ್ರ ಭಾಗವತ ಜ್ಞಾನಸತ್ರ ನಡೆಯಲಿದೆ ಎಂದು ವಿಜಯೀಂದ್ರ ಗುಡಿ ಅವರು ತಿಳಿಸಿದ್ದಾರೆ.