ರಬಕವಿ-ಬನಹಟ್ಟಿ ತಹಸೀಲ್ದಾರ್ ಕಚೇರಿಯಲ್ಲಿ ಭಾನುವಾರ ಮಹರ್ಷಿ ಭಗೀರಥ ಮಹಾರಾಜರ ಜಯಂತಿ ಆಚರಿಸಲಾಯಿತು. ತಹಸೀಲ್ದಾರ್ ಗಿರೀಶ ಸ್ವಾದಿ, ಶಾಸಕ ಸಿದ್ದು ಸವದಿ, ಭೀಮಶಿ ಪಾಟೀಲ, ಭೀಮಶಿ ಸಸಾಲಟ್ಟಿ ಮತ್ತಿತರರಿದ್ದಾರೆ. 
ಜಿಲ್ಲೆ

ಛಲ ಬಿಡದ ಪ್ರಯತ್ನಕ್ಕೆ ಭಗೀರಥರು ಸ್ಫೂರ್ತಿ

ರಬಕವಿ-ಬನಹಟ್ಟಿ: ಭಗೀರಥ ಮಹರ್ಷಿಗಳ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ತಹಸೀಲ್ದಾರ್ ಗಿರೀಶ ಸ್ವಾದಿ ಹೇಳಿದರು.

ಮಹರ್ಷಿ ಭಗೀರಥ ಮಹಾರಾಜರ ಜಯಂತಿ ನಿಮಿತ್ತ ರಬಕವಿ-ಬನಹಟ್ಟಿ ತಹಸೀಲ್ದಾರ್ ಕಚೇರಿಯಲ್ಲಿ ಭಾನುವಾರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಭಗೀರಥರಿಂದಲೇ ಭೂಲೋಕದಲ್ಲಿಂದು ಪಾವನ ಗಂಗೆ ಹರಿಯುತ್ತಿದ್ದಾಳೆ. ಪಾಪನಾಶಿನಿಯಾಗಿ ಸಕಲ ಜೀವ ಜಂತುಗಳ ಕೊಳೆ ತೊಳೆದು ಪವಿತ್ರರನ್ನಾಗಿಸುತ್ತಿದ್ದಾಳೆ ಎಂಬ ನಂಬಿಕೆ ಭಾರತೀಯರಲ್ಲಿದೆ. ಇವೆಲ್ಲ ಪುರಾಣ ಕಥೆಗಳೇ ಆಗಿದ್ದರೂ, ಛಲ ಬಿಡದ ಅವರ ಪ್ರಯತ್ನಕ್ಕೆ ಅವರ ನೆನಪು ಸದಾ ಸ್ಫೂರ್ತಿಯಾಗಿರುತ್ತದೆ ಎಂದರು.

ಶಾಸಕ ಸಿದ್ದು ಸವದಿ, ಜಿಲ್ಲಾಧ್ಯಕ್ಷ ಭೀಮಶಿ ಪಾಟೀಲ, ತಾಲೂಕು ಉಪ್ಪಾರ ಸಮಾಜದ ಅಧ್ಯಕ್ಷ ಭೀಮಶಿ ಸಸಾಲಟ್ಟಿ, ಧರೆಪ್ಪ ಉಳ್ಳಾಗಡ್ಡಿ, ಪಿ.ಜಿ. ಕಾಖಂಡಕಿ, ಪರಪ್ಪ ಬ್ಯಾಕೋಡ, ಬಸವರಾಜ ಗೋಪಾಳಿ, ಬಸವರಾಜ ಶಿರೋಳ, ವಿಠ್ಠಲ ಹೆಗ್ಗನ್ನವರ, ಶಂಕರ ಪಾಟೀಲ, ಮಂಜುನಾಥ ಕೊಡಗನೂರ, ವಿಠ್ಠಲ ಕಾಖಂಡಕಿ, ವಿಠ್ಠಲ ಬ್ಯಾಕೋಡ, ರಾಯಪ್ಪ ಹೆಗ್ಗನ್ನವರ, ನಾಗರಾಜ ಕಾಡಾಪುರ, ಬಸವರಾಜ ಮುಲೋಡಿ, ಸುರೇಶ ಪಾಟೀಲ, ಹನಮಂತ ಕೊಡಗಾನೂರ, ಯಮನಪ್ಪ ಉಪ್ಪಾರ, ರಾಜು ಮೆಳವಣಕಿ, ಅರ್ಜುನ ಕಾಖಂಡಕಿ ಮತ್ತಿತರರಿದ್ದರು.