ಹೊಳೆನರಸೀಪುರ ಪಟ್ಟಣದ ಹೂವಿನ ಮಾರುಕಟ್ಟೆ ವರ್ತಕರು ಭಗೀರಥ ಮಹರ್ಷಿ ಜಯಂತಿಯನ್ನು ಭಾನುವಾರ ಆಚರಿಸಿದರು. ಪುರಸಭಾ ಅಧ್ಯಕ್ಷ ಎಚ್.ಕೆ.ಪ್ರಸನ್ನ, ಮುಖಂಡ ಕೃಷ್ಣ, ಮಾರುಕಟ್ಟೆ ವರ್ತಕರಾದ ಬಾಬು, ಶ್ರೀನಿವಾಸ್, ಕೃಷ್ಣಮೂರ್ತಿ, ಚಂದ್ರ, ಗಿರಿ, ಗಣೇಶ್ ಇತರರು ಇದ್ದರು. 
ಜಿಲ್ಲೆ

ಹೊಳೆನರಸೀಪುರದಲ್ಲಿ ಭಗೀರಥ ಮಹರ್ಷಿ ಜಯಂತ್ಯುತ್ಸವ

ಹೊಳೆನರಸೀಪುರ: ಪಟ್ಟಣದ ಹೂವಿನ ಮಾರುಕಟ್ಟೆ ವರ್ತಕರು ಭಗೀರಥ ಮಹರ್ಷಿ ಜಯಂತ್ಯುತ್ಸವವನ್ನು ಭಾನುವಾರ ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಭಗೀರಥ ಮಹರ್ಷಿ ಭಾವಚಿತ್ರಕ್ಕೆ ಉಪ್ಪಾರ ಜನಾಂಗ ಹಾಗೂ ಮಾರುಕಟ್ಟೆ ವ್ಯಾಪಾರಸ್ಥರು ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು. ಸಾರ್ವಜನಿಕರಿಗೆ ಪ್ರಸಾದ ವಿತರಿಸಿದರು. ಕೇಕ್ ಕತ್ತರಿಸಿ ಹಂಚಿದರು. ಪುರಸಭಾ ಅಧ್ಯಕ್ಷ ಎಚ್.ಕೆ.ಪ್ರಸನ್ನ, ಮುಖಂಡ ಕೃಷ್ಣ, ಮಾರುಕಟ್ಟೆ ವರ್ತಕರಾದ ಬಾಬು, ಶ್ರೀನಿವಾಸ್, ಕೃಷ್ಣಮೂರ್ತಿ, ಚಂದ್ರ, ಗಿರಿ, ಗಣೇಶ್ ಇತರರು ಇದ್ದರು.