ಚಿಕ್ಕಬಳ್ಳಾಪುರ: ಜೀವನದ ಯಶಸ್ಸಿನ ಗುರಿಯನ್ನು ಸಾಧಿಸಲು ಪ್ರಾಮಾಣಿಕವಾಗಿ ಶ್ರಮಿಸಲು ನಟ ಶ್ರೀ ಮುರಳಿ ಸಲಹೆ ನೀಡಿದರು.
ಇಲ್ಲಿನ ಎಸ್ಜೆಸಿ ತಾಂತ್ರಿಕ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ಕೈಗೊಂಡಿದ್ದ ಸಂಭ್ರಮ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಪ್ರತಿಯೊಬ್ಬರಲ್ಲೂ ವಿಶೇಷ ಪ್ರತಿಭೆ ಇರುತ್ತದೆ. ಆದರೆ, ಸಕಾಲದಲ್ಲಿ ಅವಕಾಶಗಳನ್ನು ಸದ್ಬಳಸಿಕೊಂಡು ಸಾಮರ್ಥ್ಯವನ್ನು ಪ್ರದರ್ಶಿಸಿದಾಗ ಮಾತ್ರ ಬೆಲೆ ಸಿಗುತ್ತದೆ. ಇದರಲ್ಲಿ ಅನೇಕರು ಯಶಸ್ಸಿ ಹೊಂದುತ್ತಾರೆ. ಇದಕ್ಕೆ ನಿರಂತರ ಪ್ರಯತ್ನ ಹಾಗೂ ಪ್ರಾಮಾಣಿಕ ಪರಿಶ್ರಮವೇ ಮುಖ್ಯ ಕಾರಣ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಿನಿಮಾ ಡೈಲಾಗ್ ಹೊಡೆದು ರಂಜಿಸಿದರು. ಒಂದೊಂದು ಪಂಚ್ ಗೂ ವಿದ್ಯಾರ್ಥಿಗಳು ಜೋರಾಗಿ ಕೂಗಿ ಸಂಭ್ರಮಿಸಿದರು.
ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಶಾಖಾ ಮಠದ ಶ್ರೀ ಮಂಗಳನಾಥ ಸ್ವಾಮೀಜಿ, ಬಿಜಿಎಸ್ ಆಡಳಿತಾಧಿಕಾರಿ ಪ್ರೊ ಎನ್.ಶಿವರಾಮರೆಡ್ಡಿ, ಪ್ರಾಂಶುಪಾಲ ಜಿ.ಟಿ.ರಾಜು, ಆಡಳಿತಾಧಿಕಾರಿ ಜಿ.ಆರ್.ರಂಗಸ್ವಾಮಿ ಮತ್ತಿತರರು ಇದ್ದರು.
*ಸಂಭ್ರಮದ ಖುಷಿ
ವಿವಿಧ ಉಡುಗೆ ತೊಡುಗೆಗಳು, ಸಾಂಸತಿಕ ಕಾರ್ಯಕ್ರಮಗಳು, ವಿವಿಧ ಸ್ಪರ್ಧೆಗಳೊಂದಿಗೆ ವಿದ್ಯಾರ್ಥಿಗಳು ಸಂಭ್ರಮದ ಖುಷಿ ಅನುಭವಿಸಿದರು. ಗಣ್ಯರನ್ನು ಕಾಲೇಜಿನ ಪ್ರವೇಶದ್ವಾರದಲ್ಲಿ ದೀಪಗಳನ್ನು ಹೊತ್ತು ವಿದ್ಯಾರ್ಥಿನಿಯರು, ಕಲಾ ತಂಡಗಳು, ಸಿಬ್ಬಂದಿ ಕಾಲ್ನಡಿಗೆಯಲ್ಲಿ ಸಾಗುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಇದಕ್ಕೆ ಡೊಳ್ಳು ಕುಣಿತ, ಭರತನಾಟ್ಯ, ಕೋಲಾಟ ನೃತ್ಯ ಮೆರಗು ನೀಡಿತು. ಬಸವಣ್ಣ, ವೀರಭದ್ರ ಸೇರಿದಂತೆ ಹಲವರು ವೇಷಧಾರಿಗಳು,
ಕೊಡಗು, ದಣ ಕನ್ನಡ, ಬಿಜಾಪುರ ಸೇರಿದಂತೆ ರಾಜ್ಯದ ವಿವಿಧ ಉಡುಗೆ ತೊಡುಗೆಗಳಲ್ಲಿ ವಿದ್ಯಾರ್ಥಿಗಳು ಗಮನ ಸೆಳೆದರು.