ಜಿಲ್ಲೆ

ಸೂರ್ಯನ ಪ್ರಕಾಶದಂತೆ ಭಾಗವತ ತಾತ್ಪರ್ಯ ನಿರ್ಣಯ

ಹೊಳೆಹೊನ್ನೂರು: ಶ್ರೀ ಮಧ್ವಾಚಾರ್ಯರು ಬರೆದಿರುವ ಭಾಗವತ ತಾತ್ಪರ್ಯ ನಿರ್ಣಯ ಸೂರ್ಯನ ಪ್ರಕಾಶ ಇದ್ದಂತೆ ಎಂದು ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಗಳು ಹೇಳಿದರು.

ಪಟ್ಟಣದ ಶ್ರೀ ಸತ್ಯಧರ್ಮ ತೀರ್ಥ ಸನ್ನಿಧಾನದಲ್ಲಿ ಶ್ರೀ ಸತ್ಯಾತ್ಮ ತೀರ್ಥಶ್ರೀ ಪಾದರ ೨೮ನೇ ಚಾತುರ್ಮಾಸ್ಯದ ಅಂಗವಾಗಿ ಮಂಗಳವಾರ ನಡೆದ ವಿದ್ವತ್ ಸಭೆಯಲ್ಲಿ ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.
ನಮಗೆ ಬೇಕಾದದ್ದು ಕೇವಲ ಭಾಗವತ ಅರ್ಥ. ಉಳಿದೆಲ್ಲವನ್ನೂ ಪುರಾಣ ತಾತ್ಪರ್ಯ ನಿರ್ಣಯ ಗ್ರಂಥ ತಿಳಿಸುತ್ತದೆ. ಸಕಲ ಪುರಾಣಗಳನ್ನೂ ಅರ್ಥ ಮಾಡಿಕೊಳ್ಳಲು ಬಯಸುವವರಿಗೆಲ್ಲ ಶ್ರೀಮಧ್ವಾಚಾರ್ಯರು ಮಹಾ ಉಪಕಾರ ಮಾಡಿದ್ದಾರೆ. ವ್ಯಾಖ್ಯಾನದ ಕೌಶಲ, ಶೈಲಿ, ಪ್ರಾಮಾಣಿಕತೆ ವರ್ಣಿಸಲು ಅಸಾಧ್ಯ. ಆಕರ್ಷವಾದ ಪರಂಪರೆ, ಪದ್ಮಪುರಾಣದ ವಾಕ್ಯಗಳಿಗೆ ಅನುಗುಣವಾಗಿ ವೇದವ್ಯಾಸರ ಮಾತುಗಳಿಗೆ ಪರಮಾನುಗ್ರಹ ಮಾಡಿ ತಿಳಿಸುತ್ತಾರೆ ಎಂದರು.
ಜಮಖAಡಿಯ ಪ್ರಸಿದ್ಧ ವಿದ್ವಾಂಸ ಶುಕಾಚಾರ್ಯ ಗಲಗಲಿ ಅವರ ಪ್ರವಚನವನ್ನು ಶಿಷ್ಯ ಅನಂತಾಚಾರ್ಯ ಅನುವಾದ ಮಾಡಿರುವ ಶ್ರೀಮದ್ ಭಾಗವತ ಭಾವಮಂಜರಿ ಪುಸ್ತಕದ ೫ನೇ ಮುದ್ರಣವನ್ನು ಶ್ರೀಗಳು ಅನಾವರಣ ಮಾಡಿದರು. ನಂತರ ಶ್ರೀ ಜಯತೀರ್ಥರ ಮೂಲ ವ್ರಂದಾವನ ಕ್ಷೇತ್ರ ಮಳಖೇಡ ಹಾಗೂ ಮಣ್ಣೂರಿನಿಂದ ಶ್ರೀ ಮಾಧವ ತೀರ್ಥರು ಮತ್ತು ಶ್ರೀವೇದೇಶ ತೀರ್ಥರ ಮೂಲ ವ್ರಂದಾವನಗಳ ಶೇಷವಸ್ತç ಹಾಗೂ ಮಂತ್ರಾಕ್ಷತೆಯನ್ನು ಶ್ರೀಗಳಿಗೆ ಸಮರ್ಪಿಸಲಾಯಿತು.
ಪ್ರಭಂಜನ ಆಚಾರ್ಯ ಕಲ್ಲೂರು ಪ್ರವಚನ ನೀಡಿದರು. ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ್ಯ, ನವರತ್ನ ಶ್ರೀನಿವಾಸಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ವಾದಿರಾಜ ಅಗ್ನಿಹೋತ್ರಿ, ಮಧುಸೂಧನ ನಾಡಿಗ್, ಸಿ.ಪಿ.ವಾದಿರಾಜ, ಗುರುರಾಜ ಕಟ್ಟಿ ಹಾಗೂ ಭಕ್ತರು ಇದ್ದರು.

ನಿತ್ಯ ನೂತನ ವಸ್ತç
ಉತ್ತರಾದಿ ಮಠಾಽÃಶ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಸಂಸ್ಥಾನ ಪ್ರತಿಮೆಗಳಾದ ಮೂಲ ಸೀತಾರಾಮಚಂದ್ರ ದೇವರು ಮತ್ತು ಪಟ್ಟಣದಲ್ಲಿ ಸನ್ನಿಹಿತರಾಗಿರುವ ಶ್ರೀ ಸತ್ಯಧರ್ಮ ತೀರ್ಥರ ಮೂಲ ವ್ರಂದಾವನಕ್ಕೆ ನೂತನ ರೇಷ್ಮೆ ವಸ್ತçವನ್ನು ಶ್ರೀಪಾದಂಗಳವರು ಸಮರ್ಪಣೆ ಮಾಡಿದರು. ಸೇವಾ ರೂಪದಲ್ಲಿ ರೇಷ್ಮೆ ವಸ್ತç ಸಲ್ಲಿಸಲು ಭಕ್ತರಿಗೆ ಅವಕಾಶವಿದೆ.