ಜಿಲ್ಲೆ

ಭಗವದ್ಗೀತೆ ಅಭಿಯಾನ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಇಲ್ಲಿನ ಸಿಂಗಾರ ಸಖಿ ಬಳಗದಲ್ಲಿ ಇತ್ತೀಚೆಗೆ ಭಗವದ್ಗೀತೆ ಅಭಿಯಾನ ಆಯೋಜಿಸಲಾಗಿತ್ತು.

ಶ್ರೀಮದ್ಭಗವದ್ಗೀತೆಯ 9ನೇ ಅಧ್ಯಾಯದ ಮುಖ್ಯಾಂಶಗಳನ್ನು ವಿವರಿಸಿದ ಉಷಾ ರಾಮಾನಂದನ ಹೆಗಡೆ, ಶ್ರೀ ಶಂಕರಾಚಾರ್ಯರ ಭಜಗೋವಿಂದಂ, ಪುರಂದರ ದಾಸ, ಕನಕದಾಸ ಮುಂತಾದ ಅನುಭಾವಿಗಳ ಪದ್ಯಗಳನ್ನು ಪ್ರಾಸಂಗಿಕವಾಗಿ ಉದಾಹರಿಸಿದರು.

ಸಂಗೀತ ವಿದುಷಿ ರಾಧಾ ದೇಸಾಯಿ ಅವರಿಂದ ಭಗವದ್ಗೀತೆಯ ಈ ವರ್ಷದ ಅಭಿಯಾನದ ಗೀತಾ ಪಠ್ಯ 9ನೇ ಅಧ್ಯಾಯದ ಪಠಣ, ಸುಸ್ವರ ಸಂಯೋಜನೆಯೊಂದಿಗೆ ನಡೆಯಿತು.

ಜಿ.ಆರ್. ಭಟ್ಟ ಅವರು, ಪ್ರಸಕ್ತ ವರ್ಷದ ಭಗವದ್ಗೀತೆೆ ಅಭಿಯಾನದ ಧಾರವಾಡ ಜಿಲ್ಲೆಯ ಕಾರ್ಯಕ್ರಮಗಳನ್ನು ವಿವರಿಸಿದರು.

ಹುಬ್ಬಳ್ಳಿ -ಧಾರವಾಡ ಹವ್ಯಕ ಸಂಘದ ಅಧ್ಯಕ್ಷ ವಿ.ಎಂ. ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಬಳಗದ ಅಧ್ಯಕ್ಷೆ ಅನಿತಾ ಭಟ್ಟ ಇದ್ದರು. ಸುಧಾ ಯಾಜಿ ವಂದಿಸಿದರು.