ಅಳವಂಡಿಯಲ್ಲಿ ಭಗತ್‌ಸಿಂಗ್ ಜಯಂತಿ ಕಾರ್ಯಕ್ರಮ ನಡೆಯಿತು. ಪ್ರಮುಖರಾದ ವೀರಣ್ಣ, ಸತೀಶ, ವೆಂಕಟೇಶ, ಗೋಣೇಶ, ಆಕಾಶ, ಮಂಜು, ಪ್ರಜ್ವಲ, ರವಿ, ಮಾಲತೇಶ, ಗಣೇಶ ಇತರರಿದ್ದರು. 
ಜಿಲ್ಲೆ

ಭಗತ್‌ಸಿಂಗ್ ತ್ಯಾಗ-ಶೌರ್ಯದ ಪ್ರತೀಕ

Kopala - Desk - Eraveni

ಅಳವಂಡಿ: ಭಗತ್‌ಸಿಂಗ್ ಅವರ ದೇಶಪ್ರೇಮ ಯುವಕರಿಗೆ ಪ್ರೇರಣೆ. ಬ್ರಿಟಿಷರ ಕಪಿಮುಷ್ಠಿಯಿಂದ ದೇಶವನ್ನು ಮುಕ್ತಿಗೊಳಿಸಲು ಕ್ರಾಂತಿಕಾರಿ ಮಾರ್ಗವನ್ನು ಅನುಸರಿಸಿದ್ದರು ಎಂದು ಶಿಕ್ಷಕ ನೀಲಪ್ಪ ಹಕ್ಕಂಡಿ ತಿಳಿಸಿದರು.

ಗ್ರಾಮದ ಭಗತ್‌ಸಿಂಗ್ ಯುವಕ ಸಂಘ ಹಾಗೂ ಗ್ರಾಮಸ್ಥರಿಂದ ಹಮ್ಮಿಕೊಂಡಿದ್ದ ಭಗತ್‌ಸಿಂಗ್ ಜಯಂತಿ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.

ಭಗತ್‌ಸಿಂಗ್ ಅವರ ಹೆಸರು ಧೈರ್ಯ, ಶೌರ್ಯ, ತ್ಯಾಗದ ಪ್ರತೀಕ. ಭಾರತದ ಸ್ವಾತಂತ್ರೃ ಹೋರಾಟದಲ್ಲಿ ಅವರ ಪಾತ್ರ ಬಹು ದೊಡ್ಡದು. ಬ್ರಿಟಿಷರ ವಿರುದ್ಧ ಎದೆಗುಂದದೆ ಹೋರಾಡಿದರು ಎಂದರು.

ಪ್ರಮುಖರಾದ ವೀರಣ್ಣ ಮಟ್ಟಿ, ಸತೀಶ ಜಾಣಗಾರ, ವೆಂಕಟೇಶ, ಗೋಣೇಶ, ಆಕಾಶ, ಮಂಜು, ಪ್ರಜ್ವಲ, ರವಿ, ಮಾಲತೇಶ, ಗಣೇಶ, ವಿನಾಯಕ, ಸಂತೋಷ, ರವಿ, ಮೌನೇಶ, ಕ್ರಾಂತಿಕುಮಾರ, ಕಾಳೇಶ, ಸಾಯಿ ಬಾಬಾ, ಶಿವು, ಸತೀಶ, ಆಕಾಶ, ಬಸವರಾಜ, ಮಲ್ಲಿಕಾರ್ಜುನ ಇತರರಿದ್ದರು.