ಜಿಲ್ಲೆ

ಭಗವದ್ಗೀತಾ ಅಭಿಯಾನ ವಿಜೇತರಿಗೆ ಬಹುಮಾನ ವಿತರಣೆ

Dharwada - Basavaraj Idli

ಹುಬ್ಬಳ್ಳಿ: ಸೋಂದಾ ಶ್ರೀ ಸ್ವರ್ಣವಲ್ಲಿ ಮಹಾ ಸಂಸ್ಥಾನದ ಶ್ರೀಮದ್ ಭಗವದ್ಗೀತಾ ಅಭಿಯಾನ ಧಾರವಾಡ ಜಿಲ್ಲಾ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಭಗವದ್ಗೀತೆ ಕುರಿತ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಗರದಲ್ಲಿ ನಡೆಯಿತು.

ಭಗವದ್ಗೀತಾ ಅಭಿಯಾನ ಸಮಿತಿಯ ಪದಾಧಿಕಾರಿಗಳಾದ ಅರವಿಂದ ಮುತ್ತಗಿ, ಗೋಪಾಲಕೃಷ್ಣ ಹೆಗಡೆ, ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ವಿ.ಎಂ. ಭಟ್ ಅವರು ಪ್ರಮಾಣ ಪತ್ರಗಳನ್ನು ವಿತರಿಸಿದರು.

ಪ್ರಾಥಮಿಕ ವಿಭಾಗದ ಭಾಷಣ ಸ್ಪರ್ಧೆಯಲ್ಲಿ ಸಾನಿಧ್ಯ ಸಂಜೀವ, ನರಸಿಂಹ ಬೆಳಗಾವಕರ್ ಹಾಗೂ ಭುವನ ಪಿ.ಬಿ. ಅವರು ಅನುಕ್ರಮವಾಗಿ ಪ್ರಥಮ, ದ್ವೀತಿಯ ಮತ್ತು ತೃತೀಯ ಸ್ಥಾನ ಪಡೆದರು.

ಪ್ರೌಢಶಾಲೆ ವಿಭಾಗ- ರವಿಕಿರಣ ಭಟ್, ಸಾಕ್ಷಿ ಕುಲಕರ್ಣಿ ಹಾಗೂ ಶ್ರೇಯಸ್ ಬಾರಕೇರ.
ಕಂಠಪಾಠ ಸ್ಪರ್ಧೆ- ಪ್ರಾಥಮಿಕ- ಶ್ರದ್ಧಾ ಶಾನಭಾಗ್, ಪರಿಮಳಾ ಜೋಶಿ ಹಾಗೂ ವತ್ಸಾ ಎಸ್.
ಪ್ರೌಢಶಾಲೆ ವಿಭಾಗ- ಅಂಕಿತ ರಾಮದುರ್ಗ, ಕಾತಿರ್ಕ ಕೆ., ಅರ್ಜುನ್ ಪಿ.

ರಸಪ್ರಶ್ನೆ ಸ್ಪರ್ಧೆ- ರಾಷ್ಟ್ರೋತ್ಥಾನ ಶಾಲೆಯ ವೀರರಾಜ ಕೆ., ದಾನೇಶ ಎಂ.ವಿ. ಎಸ್.ಆರ್.. ಬೊಮ್ಮಾಯಿ ರೋಟರಿ ಸ್ಕೂಲ್ ನ ರುಕ್ಮಿಣಿ ಸಾಲಗುಂದಿ, ಅದಿತಿ ಕುಲಕರ್ಣಿ ಹಾಗೂ ಭಾವದೀಪ ಶಾಲೆಯ ಶ್ರಾವಣಿ ಕುಲಕರ್ಣಿ, ಮಾನಸಿ ಗಿರೀಶ ಹಿರೇಮಠ ಪಡೆದಿದ್ದಾರೆ.
ವೀಣಾ ಶಿವರಾಮ ಹೆಗಡೆ ಕಾರ್ಯಕ್ರಮ ನಡೆಸಿಕೊಟ್ಟರು.