ಜಿಲ್ಲೆ

ಜಾಹೀರಾತು ನಂಬಿ 6.83 ಲಕ್ಷ ರೂ. ಕಳೆದುಕೊಂಡ ಭದ್ರಾವತಿ ವ್ಯಕ್ತಿ

ಶಿವಮೊಗ್ಗ: ಸಾಮಾಜಿಕ ಜಾಲತಾಣದಲ್ಲಿ ಬಂದ ಷೇರು ಮಾರುಕಟ್ಟೆ ಹೂಡಿಕೆಗೆ ಸಂಬಂಧಿಸಿದ ಜಾಹೀರಾತು ನಂಬಿದ ವ್ಯಕ್ತಿ 6.83 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಭದ್ರಾವತಿಯ ಹೊಸಮನೆ ಬಡಾವಣೆ ನಿವಾಸಿ ವಂಚನೆಗೊಳಗಾದ ವ್ಯಕ್ತಿ. ಫೇಸ್‌ಬುಕ್ ನೋಡುತ್ತಿದ್ದಾಗ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಕುರಿತಂತೆ ಜಾಹೀರಾತೊಂದು ಬಂದಿದೆ. ಆ್ಯಪ್‌ವೊಂದರಲ್ಲಿ ಹಣ ಹೂಡಿಕೆ ಮಾಡಿ ಷೇರುಗಳನ್ನು ಖರೀದಿಸಿದರೆ, ಹೆಚ್ಚಿನ ಲಾಭಾಂಶ ಬರುತ್ತದೆ ಎಂಬ ಸಂದೇಶ ಗಮನಿಸಿದ್ದಾರೆ. ಆ ಮಾಹಿತಿ ನಂಬಿ ಹಂತ ಹಂತವಾಗಿ 6,83,127 ರೂ.ಗಳನ್ನು ಆನ್‌ಲೈನ್ ಮೂಲಕ ಹೂಡಿಕೆ ಮಾಡಿದ್ದಾರೆ. ನಂತರ ಹಣ ವಿತ್ ಡ್ರಾ ಮಾಡಲು ಮುಂದಾದ ವೇಳೆ ಆ್ಯಪ್ ಲಾಕ್ ಆಗಿದೆ. ಸೈಬರ್ ವಂಚಕರಿಂದ ಮೋಸ ಹೋಗಿರುವುದು ಗೊತ್ತಾಗಿದ್ದು,ಶಿವಮೊಗ್ಗ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.