ಬಾಗಲಕೋಟೆ: ನಾನು ಯಾವುದೇ ರೈತರ ಜಮೀನು, ಮನೆ ಮೇಲೆ ಸಾಲ ಹಾಕಿಲ್ಲ. ಸ್ವಂತ ಉದ್ಯೋಮದ ಮೂಲಕ ೭೦ ಸಾವಿರ ಜನರಿಗೆ ಉದ್ಯೋಗ ನೀಡಿದ್ದೇನೆ. ರಾಜಕೀಯ ಮಾಡುವಾಗ ಮಾಡಿ. ವೈಯಕ್ತಿಕವಾಗಿ ನನ್ನ ತಂಟೆಗೆ ಬಂದರೇ ಸುಮ್ಮನೀರಲ್ಲ ಅಂತ ಸಚಿವ ಮುರುಗೇಶ ನಿರಾಣಿ ವಿರೋಧಿಗಳಿಗೆ ಚಾಟಿ ನೀಡಿದರು.
ಕಲಾದಗಿ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೀಳಗಿ ಮತಕ್ಷೇತ್ರ ಕೈಗೊಂಡ ಅಭಿವೃದ್ಧಿ ಕಾರ್ಯ ಪ್ರಸ್ತಾಪ ಮಾಡುತ್ತಲೆ ವಿರೋಧಿಗಳ ವಿರುದ್ಧ ಗುಟುರು ಹಾಕಿದರು. ರಾಜಕಾರಣ ಮಾಡುವುದಾಗ ಮಾಡಿ. ನನ್ನ ವಿರೋಧವಿಲ್ಲ. ಆದರೇ ಸುಖಾಸುಮ್ಮನೇ ಟೀಕೆಗಳನ್ನು ಸಹಿಸಲು ಸಾಧ್ಯವಿಲ್ಲ. ಮೊನ್ನೆ ಕಲಾದಗಿಯಲ್ಲಿ ಇದೇ ವೇದಿಕೆ ಮೇಲೆ ನಡೆದ ಕಾರ್ಯಕ್ರಮದಲ್ಲಿ ಆರೋಪಗಳು ಮಾಡುವುದು ಸತ್ಯಕ್ಕೆ ದೂರ. ಯಾವನೋ ಯಲ್ಲಪ್ಪ ಹಗಡೆ ನನ್ನ ವಿರುದ್ಧ ಸಽðಸು. ಪ್ರಜಾಪ್ರಭುತ್ವವಿದು. ಯಾರಬೇಕಾದರು ಸ್ಪರ್ಧೆ ಮಾಡಬಹುದು. ಅದು ಬಿಟ್ಟು ಸುಳ್ಳು ಆರೋಪ ಮಾಡಬಾರದು. ನನ್ನ ತಂಟೆಗೆ ಬಂದರೇ ಸುಮ್ಮನಿರುವುದಿಲ್ಲ ಅಂತ ಗುಡುಗಿದರು.
ಕಾಂಗ್ರೆಸ್ ನಾಯಕರಿಗೆ ಸವಾಲ್ ಹಾಕಿದ ನಿರಾಣಿ..
ಇನ್ನು ಈಚೆಗೆ ಪ್ರಜಾಧ್ವನಿಯಾತ್ರೆಯಲ್ಲಿ ಹರಿಹಾಯ್ದಿದ್ದ ಕಾಂಗ್ರೆಸ್ ನಾಯಕರಿಗೆ ಸಚಿವ ಮುರುಗೇಶ ನಿರಾಣಿ ಟಾಂಗ್ ನೀಡಿ ನೇರ ಸವಾಲ್ ಹಾಕಿದರು. ನಾನು ಕೊಟ್ಟಷ್ಟು ಕಬ್ಬಿನ ಬಿಲ್ ಬೇರೆ ಕಾರ್ಖಾನೆಯವರು ಯಾರು ನೀಡಿಲ್ಲ. ನಿಮಗೆ ತಾಕತ್ ಇದ್ದರೇ ಬಿಲ್ ನೀಡಿ. ಈ ವೇದಿಕೆ ಮೇಲೆ ನಿಂತು ನಿರಾಣಿ ವಿರೋಧ ಮಾಡಿ ಹೋಗಿದ್ದಿರಲ್ಲ. ಆ ಶಕ್ತಿ ನಿಮಗೆ ಇದರೇ ನಾನು ನೀಡಿದಷ್ಟು ಬಿಲ್ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿ ಎಂದು ಕೈ ನಾಯಕರಿಗೆ ಎಚ್ಚರಿಕೆ ನೀಡಿದರು. ಯಾರಾರು ಚೀಟಿ ಬರೆದು ಅವರಿಂದ (ಸಿದ್ದರಾಮಯ್ಯ ) ಮಾತನಾಡಿಸಿದ್ದೀರಿ. ನಿಮಗೆ ತಾಕತ್ ಇದ್ದರೇ ಇನ್ನೊಂದು ಸಾರಿ ವೇದಿಕೆ ಬಂದಾಗ ನಾನು ಕೊಟ್ಟಷ್ಟು ಬಿಲ್ ಕೊಟ್ಟು ಮಾತನಾಡಿ ಎಂದು ಸವಾಲ ಹಾಕಿದರು. ಯಾರು ಯೋಗ್ಯರು ಎಂಬುದನ್ನು ಮತದಾರ ಪ್ರಭು ತೀರ್ಮಾನ ಮಾಡುತ್ತಾರೆ. ಯಾರು ಆಯ್ಕೆ ಆಗುತ್ತಾರೆ ಅವರು ವಿಧಾನಸೌಧಕ್ಕೆ ಹೋಗ್ತಾರೆ, ಯಾರು ಸೋಲ್ತಾರೆ ಅವರು ಮನೆಗೆ ಹೋಗುತ್ತಾರೆ ಎಂದು ವಿರೋಧಿಗಳಿಗೆ ಟಾಂಗ್ ನೀಡಿದರು.