ಜಿಲ್ಲೆ

ಶಿಂಧೋಳ್ಳಿ ಗ್ರಾಮದ ಮಹಾಲಕ್ಷ್ಮಿದೇವಿ ರಥದ ಭವ್ಯ ಮೆರವಣಿಗೆ

ಮಂಜುನಾಥ ಕೋಳಿಗುಡ್ಡ

ಬೆಳಗಾವಿ: ತಾಲ್ಲೂಕಿನ ಶಿಂಧೊಳ್ಳಿಗ್ರಾಮದಲ್ಲಿ 15 ವರ್ಷಗಳ ಬಳಿಕಏಪ್ರಿಲ್‌ 22ರಿಂದ 9 ದಿನಗಳ ಕಾಲ ನಡೆಯಲಿರುವ ಮಹಾಲಕ್ಷ್ಮಿ ದೇವಿ ಜಾತ್ರೆ ಹಿನ್ನೆಲೆಯಲ್ಲಿ ಸಿದ್ಧಪಡಿಸಿದ 50 ಅಡಿ ಎತ್ತರದ ರಥವನ್ನು ಅಗಸಗಿ ಗ್ರಾಮದಿಂದ ಶಿಂಧೊಳ್ಳಿಯವರೆಗೆ ಭವ್ಯ ಮೆರವಣಿಗೆ ಮೂಲಕ ತರಲಾಯಿತು.

ಉತ್ಸಾಹದಿಂದ ಪಾಲ್ಗೊಂಡಿದ್ದ ಯುವಜನರು ಭಂಡಾರ ಎರಚುತ್ತ, ಸಂಗೀತಕ್ಕೆ ತಕ್ಕಂತೆ ಕುಣಿಯುತ್ತ ಸಂಭ್ರಮಿಸಿದರು. ಜೋಗತಿಯರು, ಭಕ್ತರು ದೇವತೆಯರ ನಾಮಸ್ಮರಣೆ ಮಾಡಿದರು. ಡೊಳ್ಳುಕುಣಿತ, ಕರಡಿ ಮಜಲು, ಭಜನೆ ಮೂಲಕ ಕಲಾವಿದರು ಗಮನಸೆಳೆದರು. ಭಕ್ತರ ಜಯಘೋಷ ಮುಗಿಲು ಮುಟ್ಟಿತ್ತು.

ರಾಜು ಪಾಟೀಲ್, ಗಂಗಾಧರ ಅಗಸಿಮನಿ, ಸುರೇಶ್ ಮುಚಂಡಿ, ಪಿರಾಜಿ ಅನಗೋಳಕರ, ವೀರಭದ್ರ ನಿಲಜಿ, ಅಶೋಕ ಅಗಸಿಮನಿ, ಏಕನಾಥ ಅಗಸಿಮನಿ ಇತರರಿದ್ದರು.