ಜಿಲ್ಲೆ

ಮೂಲ ಉದ್ದೇಶ ಮರೆತ ಮುಡಾವನ್ನು ಮುಚ್ಚುವುದು ಉತ್ತಮ : ಶಾಸಕ ತನ್ವೀರ್ ಸೇಠ್

ಸದೇಶ್ ಕಾರ್ಮಾಡ್

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ತನ್ನ ಮೂಲ ಉದ್ದೇಶ ಮರೆಯುತ್ತಿದ್ದು, ಈ ರೀತಿ ಮೂಲ ಉದ್ದೇಶವನ್ನು ಮರೆತರೆ ಪ್ರಾಧಿಕಾರವನ್ನು ಮುಚ್ಚುವುದು ಸೂಕ್ತ ಎಂದು ಶಾಸಕ ತನ್ವೀರ್ ಸೇಠ್ ಆಕ್ರೋಶ ವ್ಯಕ್ತಪಡಿಸಿದರು.

ಮುಡಾ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಜೆಟ್ ಸಭೆಯಲ್ಲಿ ಮಾತನಾಡಿದ ಅವರು, ಇದು ದೂರದೃಷ್ಟಿ ಇಲ್ಲದ ಬಜೆಟ್. ಮುಡಾ ತನ್ನ ಮೂಲ ಉದ್ದೇಶವನ್ನೇ ಮರೆತ್ತಿದೆ. ನಮ್ಮ ಮುಂದಿರುವ ಸವಾಲುಗಳನ್ನು ಎದುರಿ ಸುವ ಯಾವುದೇ ವಿಚಾರ ಬಜೆಟ್‌ನಲ್ಲಿ ಇಲ್ಲ. ನಗರದ ಬೆಳವಣಿಗೆಗೆ ಪೂರಕವಾಗಿ ಪಾರ್ಕಿಂಗ್ ಕಟ್ಟಡ ನಿರ್ಮಾಣ, ಹೊಸ ಬಡಾವಣೆಗಳ ನಿರ್ಮಾಣದ ಕಡೆ ಗಮನ ಹರಿಸಿಲ್ಲ. ಮುಡಾ ದಾನ ಧರ್ಮ ಮಾಡುವ ಸಂಸ್ಥೆಯಾಗಿ ಮಾರ್ಪಾಡು ಹೊಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.